ಜ್ಯುವೆಲ್ಲರಿಯಿಂದ ಕಳವು: ಸಿಸಿಟಿವಿಯಲ್ಲಿ ಸೆರೆಯಾದ ವ್ಯಕ್ತಿ ಸೆರೆ

ಕಣ್ಣೂರು: ಚಿನ್ನದಂಗಡಿಗೆ ನುಗ್ಗಿ ಹಾಡಹಗಲೇ ಅಂಗಡಿಯಲ್ಲಿದ್ದ ವ್ಯಕ್ತಿಯ ಕಣ್ಣು ತಪ್ಪಿಸಿ ಕಳವು ನಡೆಸಿದ ಯುವಕ ಸೆರೆಯಾಗಿದ್ದಾನೆ. ಕಂಞಿಕುಳಿ ಪಂಚಾಯತ್ ನಿವಾಸಿ ಕಣ್ಣನ್ ಅಲಿಯಾಸ್ ಪೊಂಬನ್ ಕಣ್ಣನ್ (೩೩)ನನ್ನು ನೋರ್ತ್ ಪೊಲೀಸರು ಬಂಧಿಸಿದ್ದಾರೆ. ಕಳತ್ತಿವೀಡ್ ಸಂತೆಗೆ ಸಮೀಪವಿರುವ ಮನೆಯಿಂದ ಈತನನ್ನು ಸೆರೆ ಹಿಡಿಯಲಾಗಿದೆ. ನಿನ್ನೆ ಸಂಜೆ ೫ ಗಂಟೆಗೆ ಮುಲ್ಲೈಕಲ್ ಆರ್‌ಎನ್‌ಎ ಜ್ಯುವೆಲ್ಲರಿಯಿಂದ ಕಳವು ನಡೆಸಲಾ ಗಿದೆ. ಈ ವೇಳೆ   ಮಾಲಕನ ಪುತ್ರಿ ಮಾತ್ರವೇ ಅಂಗಡಿಯಲ್ಲಿದ್ದ ರೆನ್ನಲಾಗಿದೆ. ಈಕೆಯ ಗಮನವನ್ನು ತಪ್ಪಿಸಿ ಕಳವು ನಡೆಸುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇದನ್ನು ನೋಡಿ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿದ್ದಾರೆ.

You cannot copy contents of this page