ಜ್ಯುವೆಲ್ಲರಿ ನೌಕರೆ ಚಲಾಯಿಸುತ್ತಿದ್ದ ಸ್ಕೂಟರ್‌ಗೆ ಹತ್ತಿದ ಯುವಕನಿಂದ ಕಿರುಕುಳ- ದೂರು

ಕಾಸರಗೋಡು: ಜ್ಯುವೆಲ್ಲರಿ ನೌಕರೆ ಚಲಾಯಿಸುತ್ತಿದ್ದ ಸ್ಕೂಟರ್‌ನ ಹಿಂಬದಿ ಕುಳಿತು ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಯುವತಿ ನೀಡಿದ ದೂರಿನಂತೆ ನೀಲೇಶ್ವರ ಚಾಯೋತ್ ನಿವಾಸಿ ವಿರುದ್ಧ ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಕಾರಣವಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಸ್ಕೂಟರ್‌ನಲ್ಲಿದ್ದ ಇಬ್ಬರೂ ಕಾಸರಗೋಡು ನಗರದ ಜ್ಯುವೆಲ್ಲರಿಯೊಂದರ ನೌಕರರಾಗಿದ್ದಾರೆ. ಮಂಗಳವಾರ ರಾತ್ರಿ 9.30ರ ವೇಳೆ ಅವರು ಕೆಲಸ ಮುಗಿಸಿ ಮನೆಗಳಿಗೆ ಹೊರಟಿದ್ದರು. ಯುವಕ ಬೈಕ್‌ನಲ್ಲೂ, ಯುವತಿ ಸ್ಕೂಟರ್‌ನಲ್ಲಿ ಸಂಚರಿಸಿದ್ದಾರೆ. ಮೇಲ್ಪರಂಬಕ್ಕೆ ತಲುಪಿದಾಗ ಯುವಕ ಚಲಾಯಿಸುತ್ತಿದ್ದ ಬೈಕ್ ಯುವತಿಯ ಸ್ಕೂಟರನ್ನು ಹಿಂದಿಕ್ಕಿ ಮುಂದೆ ಸಾಗಿದೆ. ಬಳಿಕ ಬೈಕ್ ನಿಲ್ಲಿಸಿ ಆತ ಯುವತಿಯ ಸ್ಕೂಟರ್‌ಗೆ ಜಿಗಿದು ಹಿಂಬದಿ ಸೀಟಿನಲ್ಲಿ ಕುಳಿತಿದ್ದಾನೆ. ಅಲ್ಲದೆ ಸ್ಕೂಟರ್ ಸಂಚರಿಸುತ್ತಿದ್ದಂತೆ ಯುವತಿಗೆ ಕಿರುಕುಳ ನೀಡಲೆತ್ನಿಸಿರುವುದಾಗಿ ದೂರಲಾಗಿದೆ. ಘಟನೆ ಬಗ್ಗೆ ಕೇಸು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

You cannot copy contents of this page