ಜ್ವರಕ್ಕೆ ಮನೆ ಯಜಮಾನ ಬಲಿ

ಕಾಸರಗೋಡು: ಹಳದಿ ಕಾಮಾಲೆಗೆ ಸಂಬಂಧಿಸಿದ ಚಿಕಿತ್ಸೆ ಕಳೆದು ಮನೆಗೆ ಹಿಂತಿರುಗಿದ ಮನೆ ಯಜಮಾನ ಬಳಿಕ ಜ್ವರ ತಗಲಿ ಸಾವನ್ನಪ್ಪಿದ್ದಾರೆ. ಕೇರಳ ಜಲಪ್ರಾಧಿಕಾರದ ಗುತ್ತಿಗೆ ಕಾರ್ಮಿಕ ಹೊಸದುರ್ಗ  ಅಳರಾಯಿಯ ಎಚ್.ವಿ. ಕಮಲಾಕ್ಷನ್ (೬೭) ಸಾವನ್ನಪ್ಪಿದ ವ್ಯಕ್ತಿ. ಇವರಿಗೆ ಹಳದಿಕಾಮಲೆ ತಗಲಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಯಿತಾಗಿತ್ತು. ಅದರಲ್ಲಿ ಗುಣಮುಖಗೊಂಡು ಮೂರು ದಿನಗಳ ಹಿಂದೆಯಷ್ಟೇ ಮನೆಗೆ  ಹಿಂತಿರುಗಿದ್ದರು. ನಂತರ ಅವರಿಗೆ ಜ್ವರ ಅನುಭವಗೊಂಡಿತ್ತು. ಅದರಿಂದಾಗಿ ಅವರನ್ನು ಹೊಸದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ  ಚಿಕಿತ್ಸೆ ನೀಡಲಾಯಿತಾದರೂ ಅದು ಫಲಕಾರಿಯಾಗದೆ ಅವರು ಮೃತಪಟ್ಟರು.

ಮೃತರು ಪತ್ನಿ ಮೋಹಿನಿ, ಮಕ್ಕಳಾದ ವಿನೋದ್ ಕುಮಾರ್, ವಿದ್ಯಾ, ಶ್ರುತಿ, ಲಾವಣ್ಯ, ಗಣೇಶ, ಸಹೋದರರಾದ ಬಾಲಕೃಷ್ಣ, ಸುಬ್ರಹ್ಮಣ್ಯ, ಪ್ರಕಾಶ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page