ತಂದೆ, ತಾಯಿಯನ್ನು ಕೊಠಡಿಯಲ್ಲಿ ಕೂಡಿಹಾಕಿದ ಬಳಿಕ ಯುವತಿ ಕಾರು ಸಹಿತ ಪರಾರಿ: ಕಾರು ಪತ್ತೆ; ಯುವತಿ ಪ್ರಿಯತಮನೊಂದಿಗಿರುವುದಾಗಿ ಸೂಚನೆ
ಕುಂಬಳೆ: ತಂದೆ, ತಾಯಿ ಯನ್ನು ಮನೆಯ ಕೊಠಡಿ ಯೊಳಗೆ ಕೂಡಿ ಹಾಕಿದ ಬಳಿಕ 19ರ ಹರೆಯದ ಮಗಳು ತಂದೆಯ ಕಾರು ಸಹಿತ ಪರಾರಿಯಾದ ಘಟನೆ ನಡೆದಿದೆ. ಈ ಬಗ್ಗೆ ಲಭಿಸಿದ ದೂರಿನಂತೆ ಪೊಲೀಸರು ಹುಡುಕಾಟ ನಡೆಸು ತ್ತಿರುವ ವೇಳೆ ಕಾರು ಬಂದ್ಯೋಡು ಮೀಪಿರಿಯಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಯುವತಿ ಪ್ರಿಯತಮನೊಂದಿಗೆ ತೆರಳಿರುವುದಾಗಿ ಸೂಚನೆಯಿದೆ. ಘಟನೆಗೆ ಸಂಬಂಧಿಸಿ ತಂದೆ ನೀಡಿದ ದೂರಿನಂತೆ ಕೇಸು ದಾಖಲಿಸಿ ಕೊಂಡಿರುವುದಾಗಿ ಕುಂಬಳೆ ಪೊಲೀಸರು ತಿಳಿಸಿದ್ದಾರೆ.
ನಿನ್ನೆ ಸಂಜೆ ೩.೪೫ರ ವೇಳೆ ಈ ಘಟನೆ ನಡೆದಿದೆ. ಕಯ್ಯಾರು ಶಾಂತಿಯೋಡು ನಿವಾಸಿ ಯುವತಿ ಕಾರಿನೊಂದಿಗೆ ಪರಾರಿಯಾಗಿದ್ದಾಳೆ. ಈಕೆಗೆ ಈ ಹಿಂದೆ ಓರ್ವ ಯುವಕ ನೊಂದಿಗೆ ಪ್ರೇಮವಿತ್ತೆನ್ನಲಾಗಿದೆ. ಈ ಮಧ್ಯೆ ಆಕೆಯನ್ನು ಬೇರೊಬ್ಬ ಯುವಕನಿಗೆ ಮದುವೆ ಮಾಡಿಸ ಲಾಗಿತ್ತು. ಆದರೆ ಮದುವೆ ನಡೆದು ಎರಡು ತಿಂಗಳೊಳಗೆ ಆ ಸಂಬಂಧ ಮುರಿದುಬಿದ್ದಿತ್ತು. ಅದರ ಬೆನ್ನಲ್ಲೇ ಯುವತಿ ಒಮ್ಮೆ ಮನೆಯಿಂದ ನಾಪತ್ತೆಯಾಗಿ ಮರುದಿನ ಮರಳಿ ಬಂದಿದ್ದಳು.
ಯುವತಿಯನ್ನು ಬೇರೊಬ್ಬ ಯುವಕನಿಗೆ ಮದುವೆ ಮಾಡಿಸಲು ಮನೆಯವರು ಆಲೋ ಚಿಸುತ್ತಿರುವಂತೆಯೇ ಯುವತಿ ತಂದೆ, ತಾಯಿಯನ್ನು ಕೊಠಡಿ ಯಲ್ಲಿ ಕೂಡಿ ಹಾಕಿದ ಬಳಿಕ ಪರಾರಿಯಾಗಿ ನಾಪತ್ತೆಯಾದ ಘಟನೆ ನಡೆದಿದೆ.