ತಲಪಾಡಿ ಟೋಲ್‌ಗೇಟ್ ಉಪೇಕ್ಷಿಸಲು ಮಂಜೇಶ್ವರ ಪಂ. ಜನತೆ ನಿರ್ಧಾರ: ಹೊಸ ಬೈಪಾಸ್ ರಸ್ತೆಗೆ ಸಿದ್ಧತೆ

ಮಂಜೇಶ್ವರ: ತಲಪಾಡಿ ಟೋಲ್ ಗೇಟ್ ಮತ್ತೆ ಸುದ್ದಿಯಾಗುತ್ತಿದೆ. ಇಬ್ಬಗೆ ನೀತಿಯ ವಿರುದ್ಧ ನ್ಯಾಯ ದೊರ ಕಿಸಿಕೊಡುವಂತೆ ಮಂಜೇಶ್ವರದ ಜನತೆ ಅದೆಷ್ಟೋ ಮನವಿಯನ್ನು ಸಲ್ಲಿಸಿ ಹಲವು ಪ್ರತಿಭಟನೆಗಳನ್ನು ನಡೆಸಿದರು ಕೂಡಾ ಟೋಲ್ ಬೂತ್ ನಿರ್ವಾಹಕರ ನಡುವೆ ಘರ್ಷಣೆಗಳು ಆಗಾಗ ಸಂಭವಿಸುತ್ತಲೇ ಇದೆ. ಆದರೆ ಯಾವುದೇ ಪರಿಹಾರ ಕಾಣಲು ಸಾಧ್ಯವಾಗಿರಲಿಲ್ಲ. ತಲಪಾಡಿ ಪಂಚಾಯತಿಗೊಳಪಟ್ಟ ವಾಹನ ಗಳಿಗೆ ಉಚಿತ ಸಂಚಾರಕ್ಕೆ ಅನುವು ಮಾಡಿ ಕೊಟ್ಟ ಟೋಲ್ ಗೇಟ್ ನಿರ್ವಾಹಕರು ಮಂಜೇಶ್ವರ ಪಂಚಾಯತಿಗೊಳಪಟ್ಟವರಿಗೆ ಶುಲ್ಕ ವಿಧಿಸುತ್ತಿರುವುದು ಎಲ್ಲಿಯ ನ್ಯಾಯ…? ಇದು ಇಲ್ಲಿಯ ಗ್ರಾಮಸ್ಥರ ಪ್ರಶ್ನೆ! ಈ ಅನ್ಯಾಯವನ್ನು ವಿರೋಧಿಸಿದ ಗ್ರಾಮಸ್ಥರು ಮಂಜೇಶ್ವರ ಪಂಚಾಯತು ಅಧೀನದಲ್ಲಿರುವ ತಲಪಾಡಿ ಮರಿಯಾಶ್ರಮ ಚರ್ಚ್ನ ಹಿಂಭಾಗದಲ್ಲಿರುವ ಹಳೆಯ ರಾಷ್ಟ್ರೀಯ ಹೆದ್ದಾರಿ ಮೂಲಕ ಸೇತುವೆಯನ್ನು ನಿರ್ಮಿಸಿ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದಾರೆ. ಕೋವಿಡ್ ಕಾಲದಲ್ಲಿ ಈ ವಿಷಯ ಚರ್ಚೆಯಾಗಿದ್ದರೂ ಬಳಿಕ ಅದು ನೆನೆಗುದಿಗೆ ಬಿದ್ದಿತ್ತು. ಆದರೆ ಇದೀಗ ಈ ನೂತನ ದಾರಿ ವ್ಯವಸ್ಥೆಯ ಮೊದಲ ಹಂತವಾಗಿ ಮಂಜೇಶ್ವರ ಪಂಚಾಯತ್ ನೇತೃತ್ವದಲ್ಲಿ ಗ್ರಾಮಾಧಿಕಾರಿ ಹಾಗೂ ಸರ್ವೇ ನಡೆಸುವವರು ಆಗಮಿಸಿ ಸ್ಥಳ ಮಂಜೇಶ್ವರ ಪಂಚಾಯತ್ ಅಧೀನ ದಲ್ಲಿರುವುದನ್ನು ಖಚಿತಪಡಿಸಿ ಕೊಂಡರು. ಹೊಳೆ ದಾಟಿ ೪೦ ಮೀಟರ್ ಸ್ಥಳ ಪಂಚಾಯತ್‌ನ ಅಧೀನದಲ್ಲಿರುವುದಾಗಿ ಗ್ರಾಮಾ ಧಿಕಾರಿಯ ಪ್ರಾಥಮಿಕ ಮಾಹಿತಿ. ಇನ್ನು ಇದರ ಮುಂದುವರಿದ ಭಾಗವಾಗಿ ಸೇತುವೆ ನಿರ್ಮಿಸಲು ಬೇಕಾಗುವ ಫಂಡ್ ವ್ಯವಸ್ಥೆ ಮಾಡಿ ಮಂಜೇಶ್ವರ ಗ್ರಾಮದ ಜನತೆಗೆ ಮುಂದಿನ ವರ್ಷದಲ್ಲಿ ಟೋಲ್ ಗೇಟ್ ಬೈಪಾಸ್ ರಸ್ತೆ ನಿರ್ಮಾಣವಾಗಲಿರುವುದಾಗಿ ಪಂ.ಅಧ್ಯಕ್ಷೆ ತಿಳಿಸಿದ್ದಾರೆ.
ಈ ಸಂ ದರ್ಭ ಟೋಲ್‌ಗೇಟ್ ಹೋರಾಟ ಸಮಿತಿ ಪದಾ ಧಿಕಾರಿಗಳು, ವಾರ್ಡ್ ಸದಸ್ಯರು ಊರವರು ಸೇರಿದಂತೆ ಹಲವಾರು ಮಂದಿ ಜೊತೆಗಿದ್ದರು.

Leave a Reply

Your email address will not be published. Required fields are marked *

You cannot copy content of this page