ತಾತ್ಕಾಲಿಕ ಅಧ್ಯಾಪಕರ ವೇತನ ಓಣಂ ಹಬ್ಬಕ್ಕೂ ಮುಂಚಿತ ವಿತರಣೆ- ಸಚಿವ
ಪಾಲಕ್ಕಾಡ್: ಶಾಲೆಗಳಲ್ಲಿ ಕೆಲಸ ಮಾಡುವ ತಾತ್ಕಾಲಿಕ ಅಧ್ಯಾಪಕರ ವೇತನವನ್ನು ಓಣಂ ಹಬ್ಬದ ಮುಂಚಿತ ವಿತರಿಸಲಾಗುವುದೆಂದು ಸಚಿವ ವಿ. ಶಿವನ್ ಕುಟ್ಟಿ ನುಡಿದರು. ವೇತನ ವಿತರಣೆಯ ಸಾಫ್ಟ್‌ವೇರ್ ಆದ ಸ್ಪಾರ್ಕ್‌ನಲ್ಲಿ ಉಂ ಟಾದ ತಾಂತ್ರಿಕ ಸಮಸ್ಯೆಯಿಂದ ವಿತರಣೆ ಮೊಟಕಾಗಿತ್ತೆಂದು ಸಚಿವರು ತಿಳಿಸಿದ್ದಾರೆ. ರಾಜ್ಯದಲ್ಲಿ ಒಟ್ಟು ೧೧,೨೦೦ ತಾತ್ಕಾಲಿಕ ಅಧ್ಯಾಪಕರ ವೇತನ ಕಳೆದ ಎರಡು ತಿಂಗಳಿಂದ ಮೊಟಕಾಗಿತ್ತು. ತಾತ್ಕಾಲಿಕ ಅಧ್ಯಾಪಕರ ವೇತನ ಮೊಟಕಾಗಿ ಅವರು ಕೆಲಸ ತ್ಯಜಿಸುವ ನಿರ್ಧಾರ ಕೈಗೊಂಡ ಬಗ್ಗೆ ನಿನ್ನೆ ಕಾರವಲ್ ವರದಿ ಪ್ರಕಟಿಸಿತ್ತು. ಜೂನ್, ಜುಲೈ ತಿಂಗಳ ವೇತನ ಲಭಿಸದ ಹಿನ್ನೆಲೆಯಲ್ಲಿ ಉನ್ನತಾಧಿಕಾರಿಗಳ ಸಹಿತ ಶಾಸಕರಿಗೂ ತಾತ್ಕಾಲಿಕ ಅಧ್ಯಾಪಕರು ಮನವಿ ನೀಡಿದ್ದರು. ಹಿನ್ನೆಲೆಯಲ್ಲಿ ಸಚಿವ ಶಿವನ್ ಕುಟ್ಟಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.