ತಾಪಮಾನ ಮಟ್ಟ ಏರಿಕೆ: ಹನ್ನೊಂದು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
ಕಾಸರಗೋಡು: ತಾಪಮಾನ ಮಟ್ಟ ದಿನೇ ದಿನೇ ಹೆಚ್ಚಾಗುತ್ತಿದ್ದು, ಆ ಹಿನ್ನೆಲೆಯಲ್ಲಿ ಕಾಸರಗೋಡು ಸೇರಿದಂತೆ ರಾಜ್ಯದ 11 ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಕಾಸರಗೋಡು ಜಿಲ್ಲೆಯಲ್ಲಿ ಸಾಧಾರಣವಾಗಿ 36 ಡಿಗ್ರಿಯಲ್ಲಿರುವ ತಾಪಮಾನ ಮಟ್ಟ ಈಗ 39 ಡಿಗ್ರಿಗೇರಿದೆ. ಹೀಗಿದ್ದರೂ ಜಿಲ್ಲೆಯಲ್ಲಿ ಬೇಸಿಗೆ ಮಳೆ ಕೇವಲ ನಾಮಮಾತ್ರವಾಗಿ ಕೆಲವೆಡೆ ಮಾತ್ರವೇ ಸುರಿದಿದೆ.
ರಾಜ್ಯದಲ್ಲಿ ಅತೀ ಹೆಚ್ಚು ಎಂಬAತೆ ಪಾಲ್ಘಾಟ್ನಲ್ಲಿ ತಾಪಮಾನ ಮಟ್ಟ 41 ಡಿಗ್ರಿಗೇರಿದೆ. ಈ ವರ್ಷ ಅತೀ ಹೆಚ್ಚು ತಾಪಮಾನ ಮಟ್ಟ ದಾಖಲುಗೊಂಡಿ ರುವುದೂ ಇದೇ ಜಿಲ್ಲೆಯಲ್ಲಾಗಿದೆ.
ಲೋಕಸಭಾ ಚುನಾವಣಾ ದಿನಾಂಕ ಪ್ರಕಟಗೊಂಡ ಬಳಿಕ ಬಿಸಿಲ ಝಳವೂ ಜತೆಗೇ ಹೆಚ್ಚಾಗತೊಡಗಿದೆ. ಇದರ ಜೊತೆ ಇನ್ನೊಂದೆಡೆ ವಿದ್ಯುತ್ ಬಳ ಕೆಯೂ ಗರಿಷ್ಠ ಪ್ರಮಾಣಕ್ಕೇರಿಸ ತೊಡಗಿದೆ. ನಿನ್ನೆ ಮಾತ್ರವಾಗಿ ರಾಜ್ಯದಲ್ಲಿ 1080452 ದಶಲಕ್ಷ ಯೂನಿಟ್ ವಿದ್ಯುತ್ ಉಪಯೋಗಿಸಲಾಗಿದೆ.
ವಾಡಿಕೆ ಪ್ರಕಾರ ರಾಜ್ಯಕ್ಕೆ ಲಭಿಸಬೇಕಾಗಿರುವ ಬೇಸಿಗೆ ಮಳೆಯಲ್ಲಿ ಈ ಬಾರಿ ಶೇ. 60ರಷ್ಟು ಕುಸಿತ ಉಂಟಾಗಿದೆ. ರಾಜ್ಯದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಅತೀ ಕಡಿಮೆ ಬೇಸಿಗೆ ಮಳೆ ಸುರಿದಿದೆ.
ರಾಷ್ಟ್ರೀಯ ಹೆದ್ದಾರಿ ಹಾಗೂ ಇತರ ನಿರ್ಮಾಣ ಕೆಲಸಗಳಿಗಾಗಿ ಕೋಟಿಗಟ್ಟಲೆ ಮರಗಳನ್ನು ಕಡಿದಿರುವುದೇ ರಾಜ್ಯದಲ್ಲಿ ಸೆಖೆ ಅತೀ ಹೆಚ್ಚಾಗಿ ಅನುಭವಗೊಳ್ಳಲು ಕಾರಣವೆಂದು ಪರಿಸರ ತಜ್ಞರು ಹೇಳುತ್ತಿಗದ್ದಾರೆ. ಇನ್ನು ಬೇಸಿಗೆ ಮಳೆ ಹೆಚ್ಚಾಗಿ ಸುರಿದಲ್ಲಿ ಮಾತ್ರವೇ ಅದು ತಾಪಮಾನ ಮಟ್ಟ ಇಳಿಯಲು ದಾರಿ ಮಾಡಿಕೊಡಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.