ತಾಯಿಯ ಖಾತೆಗೆ ಕಳ್ಳನೋಟು ಠೇವಣಿಯಿರಿಸಿ ಸಿಕ್ಕಿ ಬಿದ್ದ  ಪುತ್ರ, ಸಂಬಂಧಿಕ ಸೆರೆ

ತಿರುವನಂತಪುರ: ನಗದು ಡೆಪಾಸಿಟ್ ಯಂತ್ರ (ಸಿಡಿಎಂ) ಮೂಲಕ ತಾಯಿಯ ಖಾತೆಗೆ ೪೦೦೦ ರೂಪಾಯಿ ಕಳ್ಳನೋಟು ಠೇವಣಿ ಮಾಡಿ ಮಗ ಹಾಗೂ ಸಂಬಂಧಿಕ ಸೆರೆಗೀಡಾಗಿದ್ದಾರೆ. ತಿರುವನಂತಪುರ ಪೂವಚ್ಚಾಲ್ ಎಸ್‌ಬಿಐಯ ಸಿಡಿಎಂ ಮೂಲಕ ಕಳ್ಳನೋಟು ಠೇವಣಿ ಯಿರಿಸಲಾಗಿದೆ. ಈ ಸಂಬಂಧ ಆರ್ಯನಾಡ್ ನಿವಾಸಿಗಳಾದ ಜಯನ್ ಹಾಗೂ ಬಿನೀಶ್ ಎಂಬಿವರನ್ನು ಕಾಟಾಕಡ ಪೊಲೀಸರು ಬಂಧಿಸಿದ್ದಾರೆ. ಇವರು ಸಿಡಿಎಂನಲ್ಲಿ ಠೇವಣಿಯಿರಿಸಿದ ೫೦೦ ರೂ.ಗಳ ಎಂಟು ನೋಟುಗಳು ಕಳ್ಳನೋಟು ಗಳಾಗಿವೆ ಎಂದು ಪ್ತೆಹಚ್ಚಲಾಗಿತ್ತು. ಜಯನ್ ಹಾಗೂ ಬಿನೀಶ್ ಹಣ ಠೇವಣಿ ಇರಿಸುವ ದೃಶ್ಯ ಸಿಸಿ ಟಿವಿಯಲ್ಲಿ ಪತ್ತೆಯಾಗಿದ್ದು, ಅದರ ಆಧಾರದಲ್ಲಿ ಅವರನ್ನು ಸೆರೆ ಹಿಡಿಯಲಾಗಿದೆ.

You cannot copy contents of this page