ತಾಯಿ, ಪುತ್ರಿ ನಾಪತ್ತೆ
ಕುಂಬಳೆ: ತಾಯಿ ಹಾಗೂ ಪುತ್ರಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಕಂಚಿಕಟ್ಟೆಯ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಹುಸೈನ್ ಎಂಬವರ ಪತ್ನಿ ಸಲ್ಮ (35 ) ಹಾಗೂ 9ರ ಹರೆಯದ ಪುತ್ರಿ ನಾಪತ್ತೆಯಾಗಿದ್ದಾರೆ. ಈ ತಿಂಗಳ 2ರಿಂದ ಇವರು ನಾಪತ್ತೆಯಾಗಿ ದ್ದಾರೆಂದು ಹುಸೈನ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಹುಸೈನ್-ಸಲ್ಮ ದಂಪತಿಗೆ ಮೂವರು ಮಕ್ಕಳಿದ್ದಾರೆ. ಈ ಪೈಕಿ ಇಬ್ಬರು ಮಕ್ಕಳನ್ನು ಕ್ವಾರ್ಟರ್ಸ್‌ನಲ್ಲಿ ನಿಲ್ಲಿಸಿ ಕಿರಿಯ ಮಗುವಿನ ಜತೆ ಸಲ್ಮ ನಾಪತ್ತೆಯಾಗಿದ್ದಾಳೆನ್ನಲಾಗಿದೆ.