ತಾಳಿಪಡ್ಪು ಸರ್ವೀಸ್ ರಸ್ತೆಯಲ್ಲಿ ಸಿಲುಕಿಕೊಂಡ ಲಾರಿ: ಮುಕ್ಕಾಲು ಗಂಟೆ ಸಾರಿಗೆ ಅಡಚಣೆ

ಕಾಸರಗೋಡು: ತಾಳಿಪಡ್ಪು ಸರ್ವೀಸ್ ರಸ್ತೆಯಲ್ಲಿ ಇಂದು ಬೆಳಿಗ್ಗೆ ಲಾರಿಯೊಂದು ಸಿಲುಕಿಕೊಂಡು ನಿಂತ ಪರಿಣಾಮ ಸುಮಾರು ಮುಕ್ಕಾಲು ಗಂಟೆ ಕಾಲ ಇತರ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಬಳಿಕ ಕ್ರೇನ್ ಸಹಾಯದಿಂದ ಲಾರಿಯನ್ನು ತೆರವುಗೊಳಿ ಸಲಾಯಿತು. ಇಂದು ಬೆಳಿಗ್ಗೆ 8.45ರ ವೇಳೆ ಘಟನೆ ನಡೆದಿದೆ. ಮಲಪ್ಪುರಂನಿಂದ ತಾಳಿಪಡ್ಪುವಿನ ಅಂಗಡಿಗೆ ಮಿಠಾಯಿ ತಂದ ಲಾರಿಯನ್ನು ತಿರುಗಿಸಲೆಂದು ಹಿಂದಕ್ಕೆ ಚಲಾಯಿಸಿದಾಗ ಅದರ ಪ್ಲೇಟ್ ಇಂಟರ್‌ಲಾಕ್‌ಗೆ  ಸಿಲುಕಿಕೊಂಡಿರುವುದೇ ಸಮಸ್ಯೆಗೆ ಕಾರಣವಾಗಿದೆ.

RELATED NEWS

You cannot copy contents of this page