ತುಂಬಿ ತುಳುಕುತ್ತಿದೆ ರಾಜ್ಯದ ಜೈಲುಗಳು: ಜಿಲ್ಲೆಯಲ್ಲಿ 337 ಸೇರಿದಂತೆ ರಾಜ್ಯದಲ್ಲಿ 10593 ಖೈದಿಗಳು; 252 ಮಂದಿ ಮಹಿಳೆಯರು


ಕಾಸರಗೋಡು: ರಾಜ್ಯದಲ್ಲಿ ಅಪರಾಧ ಕೃತ್ಯಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಹೊಂದಿಕೊAಡು ರಾಜ್ಯದ ಜೈಲುಗಳಿಗೆ ಬಂದು ಸೇರುತ್ತಿರುವ ಖೈದಿಗಳ ಸಂಖ್ಯೆ ಯೂ ಇನ್ನೊಂದೆಡೆ ಹೆಚ್ಚಾಗತೊ ಡಗಿದೆ.
ರಾಜ್ಯದಲ್ಲಿ ಒಟ್ಟು 57 ಜೈಲುಗ ಳಿದ್ದು, ಇದರಲ್ಲಿ 252 ಮಹಿಳಾ ಖೈದಿಗಳೂ ಸೇರಿದಂತೆ ಈಗ ಒಟ್ಟು 10,593 ಮಂದಿ ಖೈದಿಗಳು ಕಳೆಯು ತ್ತಿದ್ದಾರೆ. ಈ ಎಲ್ಲಾ ಜೈಲುಗಳಲ್ಲಿ ಒಟ್ಟಾರೆಯಾಗಿ 7200 ಖೈದಿಗಳನ್ನು ಕೂಡಿ ಹಾಕುವಷ್ಟು ಸೌಕರ್ಯ ಮಾತ್ರವೇ ಇದೆ. ಅದರ ಬದಲು ಈ ಜೈಲುಗಳಲ್ಲಿ 10,593 ಖೈದಿಗಳು ಈಗ ಕಳೆಯುತ್ತಿದ್ದು, ಇದು ಜೈಲುಗಳಲ್ಲಿ ಉಸಿರುಗಟ್ಟಿಸುವ ವಾತಾವರಣ ನಿರ್ಮಿಸತೊಡಗಿದೆ.
ಹೀಗೆ ರಾಜ್ಯದ ಜೈಲುಗಳಲ್ಲಿ ಕಳೆಯುತ್ತಿರುವವರಲ್ಲಿ 5067 ನ್ಯಾಯಾಂಗ ಬಂಧನಕ್ಕೊ ಳಗಾದವರಾಗಿದ್ದಾರೆ. ಇದರ ಹೊರತಾಗಿ 1524 ವಿಚಾರಣಾಧೀನ ಖೈದಿಗಳು, ಶಿಕ್ಷೆಗೊಳಗಾದ 3749 ಖೈದಿಗಳು ಹಾಗೂ ಇತರ 253 ಖೈದಿಗಳು ಜೈಲುಗಳಲ್ಲಿ ಕಳೆಯುತ್ತಿದ್ದಾರೆ.
ಕಾಸರಗೋಡು ಜಿಲ್ಲೆಯ ಜೈಲುಗಳಲ್ಲಿ 7 ಮಹಿಳಾ ಖೈದಿಗಳು ಸೇರಿದಂತೆ ಒಟ್ಟು 337 ಮಂದಿ ಖೈದಿಗಳು ಕಳೆಯುತ್ತಿದ್ದಾರೆ. ರಾಜ್ಯದಲ್ಲಿ ಅತೀ ಹೆಚ್ಚು ಎಂಬAತ ತಿರುವನಂ ತಪುರ ಜಿಲ್ಲೆಯಲ್ಲಿ 62 ಮಹಿಳಾ ಮತ್ತು 2624 ಪುರುಷ ಖೈದಿಗಳನ್ನು ಅಲ್ಲಿನ ವಿವಿಧ ಜೈಲುಗಳಲ್ಲಿ ಕೂಡಿ ಹಾಕ ಲಾಗಿದೆ. 1998 ಪುರುಷ ಹಾಗೂ 63 ಮಹಿಳಾ ಖೈದಿಗಳು ಹೊಂದಿರುವ ತೃಶೂರು ಜಿಲ್ಲೆ ಎರಡನೇ ಹಾಗೂ 37 ಮಹಿಳಾ ಮತ್ತು 1444 ಪುರುಷ ಖೈದಿಗಳು ಇರುವ ಕಣ್ಣೂರು ಜಲ್ಲೆ ಮೂರನೇ ಸ್ಥಾನದಲ್ಲಿದೆ.
ಕಳೆದ ಐದು ವರ್ಷದಲ್ಲಿ ಕೇರಳದಲ್ಲಿ ಜೈಲು ಸೇರುತ್ತಿರುವ ಖೈದಿಗಳ ಸಂಖ್ಯೆಯಲ್ಲಿ ಶೇ. 40ರಷ್ಟು ಹೆಚ್ಚಳ ಉಂಟಾಗಿದೆ. ಮಾದಕದ್ರವ್ಯ, ಪೋಕ್ಸೋ ಇತ್ಯಾದಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದೇ ಜೈಲುಗಳಲ್ಲಿ ಖೈದಿಗಳ ಸಂಖ್ಯೆ ಹೆಚ್ಚಾಗಲು ಪ್ರಧಾನ ಕಾರಣವಾಗಿದೆ.

Leave a Reply

Your email address will not be published. Required fields are marked *

You cannot copy content of this page