ತುರ್ತು ಪರಿಸ್ಥಿತಿ ಹೋರಾಟಗಾರ ಆರ್.ಎಸ್.ಎಸ್‌ನ ಹಿರಿಯ ಘೋಷ್ ಪ್ರಮುಖ್ ಕೆ. ಸುಧಾಕರ ಪ್ರಭು ನಿಧನ
ಕಾಸರಗೋಡು: ತುರ್ತು ಪರಿಸ್ಥಿತಿ ವಿರುದ್ಧ ಹೋರಾಟಗಾರ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾಸರಗೋಡು ಘಟಕದ ಘೋಷ್ ಪ್ರಮುಖ್ ಹಾಗೂ ಶಾರೀರಿಕ್ ಪ್ರಮುಖ್ ಆಗಿ ದೀರ್ಘ ಕಾಲಸೇವೆ ಸಲ್ಲಿಸಿದ್ದ ಹಿರಿಯ ಸ್ವಯಂ ಸೇವಕ ಹಾಗೂ ನಗರದಲ್ಲಿ ವ್ಯಾಪಾ ರಿಯೂ ಆಗಿರುವ ಕಾಸರಗೋಡು ರೈಲು ನಿಲ್ದಾಣ ಬಳಿಯ ಶ್ರೀ ವರದರಾಜ ವೆಂಕಟ್ರಮಣ ದೇವಸ್ಥಾನ ರಸ್ತೆಯ ಪ್ರಭು ನಿವಾಸದ ಕೆ. ಸುಧಾಕರ ಪ್ರಭು (೭೦) ನಿಧನಹೊಂದಿದರು. ದಿ| ರಾಮ ಪ್ರಭು-ಶಾಂಭವಿ ಪ್ರಭು ದಂಪತಿ ಪುತ್ರರಾಗಿದ ಮೃತ ಸುಧಾಕರ ಪ್ರಭು ಅವರು ಕೆಲವು ದಿನಗಳ ಹಿಂದೆ ಬೆಳ್ತಂಗಡಿಯಲ್ಲಿರುವ ಪುತ್ರಿಯ ಮನೆಗೆ ಹೋಗಿದ್ದರು. ಅಲ್ಲಿ ಅಸೌಖ್ಯ ನಿಮಿತ್ತ ಇಂದು ಬೆಳಿಗ್ಗೆ ನಿಧನ ಹೊಂದಿದರು.
ಮೃತರು ಪತ್ನಿ ಸುರೇಖಾ ಪ್ರಭು, ಮಕ್ಕಳಾದ ರಾಮಕೃಷ್ಣ ಪ್ರಭು (ಬೆಂಗಳೂರು), ಶ್ರೇಯಾ ಶಶಿಧರ್ ಪೈ, ಸಹೋದರ-ಸಹೋದರಿಯರಾದ ಶ್ರೀನಿವಾಸ ಪ್ರಭು, ದಿವಾಕರ ಪ್ರಭು, ವಸಂತಿ ಪೈ, ಜಯಂತಿ ಕಾಮತ್, ಸುಮತಿ ಕಾಮತ್, ಮುಕ್ತ್ತ ಕಾಮತ್, ವನಿತಾ ಭಟ್, ಕಾವೇರಿ ಪ್ರಭು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತದೇಹವನ್ನು ಇಂದು ಕಾಸರಗೋಡಿನ ಮನೆಗೆ ತಂದು ಸಂಜೆಯೊಳಗೆ ಅಂತ್ಯ ಸಂಸ್ಕಾರ ನಡೆ ಲಾಗುವುದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಸುಧಾಕರ ಪ್ರಭು ಅವರ ನಿಧನ ಸುದ್ದಿ ತಿಳಿದ ಆರ್‌ಎಸ್‌ಎಸ್, ಬಿಜೆಪಿ, ಸಂಘಪರಿವಾರದ ಹಲವು ನೇತಾರರು ಮತ್ತು ಕಾರ್ಯಕರ್ತರು ಸೇರಿದಂತೆ ಭಾರೀ ಸಂಖ್ಯೆಯಲ್ಲಿ ಅವರ ಮನೆ ಸಂದರ್ಶಿಸಿದರು.