ತೆಂಗಿನಕಾಯಿ ಕೊಯ್ಯುವ ವೇಳೆ ತಂತಿಯಿಂದ ವಿದ್ಯುತ್ ಶಾಕ್: ಕಾರ್ಮಿಕನಿಗೆ ಗಂಭೀರ
ಕಾಸರಗೋಡು: ತೆಂಗಿನ ಮರವೇರಿ ಕಾಯಿ ಕೊಯ್ಯುತ್ತಿದ್ದ ವೇಳೆ ಪಕ್ಕದಲ್ಲಿ ಹಾದು ಹೋಗುವ ಎಚ್.ಟಿ ವಿದ್ಯುತ್ ಲೈನ್‌ನಿಂದ ಶಾಕ್ ತಗಲಿ ಕಾರ್ಮಿಕ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ವೆಳ್ಳರಿಕುಂಡ್ ಸಮೀಪದ ತೊಡುಂಚಾಲಿನ ರವಿ (45) ಎಂಬವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇವರು ನಿನ್ನೆ ಪರಪ್ಪ ತೋಡುಂಚಾಲಿನ ತೆಂಗಿನ ತೋಟದಲ್ಲಿ ಯಂತ್ರದ ಸಹಾಯದಿಂದ ತೆಂಗಿನ ಮರವೇರಿ ಕಾಯಿ ಕೊಯ್ಯುತ್ತಿದ್ದ ವೇಳೆ ಆ ಮರದ ಮಡಲು ಹಿಡಿದೆಳೆಯುತ್ತಿದ್ದ ವೇಳೆ ಅದರ ಪಕ್ಕದ ಎಚ್‌ಟಿ ವಿದ್ಯುತ್ ಲೈನ್‌ನಿಂದ ಶಾಕ್ ತಗಲಿದೆ. ಕೂಡಲೇ ಅವರು ಕೆಳಕ್ಕೆ ಬಿದ್ದಿದ್ದಾರೆ. ತಕ್ಷಣ ಇತರರು ಸೇರಿ ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.