ತೆಂಗಿನಮರದಿಂದ ಬಿದ್ದು ಮೂರ್ತೇದಾರ ಮೃತ್ಯು

ತಲಪಾಡಿ: ತೆಂಗಿನಮರವೇರಿ ಶೇಂದಿ ತೆಗೆಯುತ್ತಿದ್ದ ವೇಳೆ ಕೆಳಗೆ ಬಿದ್ದು ಗಂಭೀರ ಗಾಯಗೊಂಡ ಮೂರ್ತೇದಾರ ಮೃತಪಟ್ಟ ಘಟನೆ ಕೊಲ್ಯ ಕಣೀರುತೋಟ ಎಂಬಲ್ಲಿ ಸಂಭವಿಸಿದೆ. ಇಲ್ಲಿನ ನಡುಪೊಲಿಕೆ ನಿವಾಸಿ ಯಶೋಧರ (46) ಮೃತಪಟ್ಟವರು. ಇಂದು ಬೆಳಿಗ್ಗೆ ತನ್ನ ಮನೆ ಬಳಿಯ ತೋಟವೊಂದರಲ್ಲಿ ಮೂರ್ತೆದಾರಿಕೆ ನಡೆಸುತ್ತಿದ್ದ ವೇಳೆ ಆಯತಪ್ಪಿ ಬಿದ್ದು ಗಾಯಗೊಂಡಿದ್ದರು. ಚಿಂತಾಜನಕ ಸ್ಥಿತಿಯಲ್ಲಿದ್ದ ಇವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿ ತಾದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಮೃತರು ಲೋ ಬಿಪಿಯಿಂದ ಬಳಲುತ್ತಿದ್ದರೆನ್ನ ಲಾಗಿದೆ. ಇದೇ ತೆಂಗಿನ ಮರದಿಂದ ಬೀಳಲು ಕಾರಣವಾಗಿರಬೇಕೆಂದು ಶಂಕಿಸಲಾಗು ತ್ತಿದ್ದು, ಸ್ಥಳೀಯರಲ್ಲಿ ಶೋಕ ಸೃಷ್ಟಿಸಿದೆ.

You cannot copy contents of this page