ತ್ಯಾಜ್ಯಮುಕ್ತ ಜಿಲ್ಲೆ ಘೋಷಣೆ

ಕಾಸರಗೋಡು: ತ್ಯಾಜ್ಯಮುಕ್ತ ನವಕೇರಳದಂಗವಾಗಿ ಜನಪರ ಕಾರ್ಯಾಗಾರದ ಚಟುವಟಿಕೆಗಳಂಗ ವಾಗಿ ಜಿಲ್ಲೆಯನ್ನು ತ್ಯಾಜ್ಯಮುಕ್ತ ಜಿಲ್ಲೆಯಾಗಿ ಘೋಷಿಸಲಾಯಿತು. ಕಾಸರಗೋಡು ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಜಿಲ್ಲಾ ಮಟ್ಟದ ಘೋಷಣೆ ನಡೆಸಿದರು. ವಿದ್ಯಾಸಂಪನ್ನರಾದ ಕೇರಳೀಯರು ವ್ಯಕ್ತಿಶುಚಿತ್ವದಂತೆ ಪರಿಸರ ಶುಚಿತ್ವಕ್ಕೂ ಪ್ರಾಧಾನ್ಯತೆ ನೀಡಬೇಕು ಎಂದು ಸಂಸದರು ಕರೆ ನೀಡಿದರು. ಆರೋಗ್ಯ ಹಾಗೂ ಶಿಕ್ಷಣ ಪರಸ್ಪರ ಪೂರಕವಾಗಿದೆ ಎಂದೂ, ಆದುದರಿಂದ ಶುಚಿತ್ವದ ಕಾರ್ಯದಲ್ಲಿ ಪ್ರತಿಯೊಬ್ಬರಿಗೂ ಸ್ವಯಂ ತಿಳುವಳಿಕೆ ಉಂಟಾಗಬೇಕೆಂದು ಅವರು ನುಡಿದರು. ಶಾಸಕ ಎನ್.ಎ. ನೆಲ್ಲಿಕುನ್ನು, ಶಾಸಕ ಇ. ಚಂದ್ರಶೇಖರ್ ಮಾತನಾಡಿ ದರು. ಜಿ.ಪಂ. ಅಧ್ಯಕ್ಷೆ ಬೇಬಿ ಬಾಲ ಕೃಷ್ಣನ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಧಿಕಾರಿ ಕೆ. ಇಂಬಶೇಖರ್, ಎಲ್‌ಎಸ್‌ಜಿಡಿ ಜೋಯಿಂಟ್ ಡೈರೆಕ್ಟರ್ ಜಿ. ಸುಧಾಕರನ್ ವರದಿ ಮಂಡಿಸಿದರು. ನಗರಸಭಾ ಅಧ್ಯಕ್ಷರು, ಹಲವು ಪಂ. ಅಧ್ಯಕ್ಷರು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದರು.

You cannot copy contents of this page