ತ್ರೀ ಪೇಸ್ ವಿದ್ಯುತ್ ತಂತಿ ಮೇಲೆ ಬಿದ್ದ ಮರ: ತಪ್ಪಿದ ಅಪಾಯ
ನೀರ್ಚಾಲು: ತ್ರಿ ಫೇಸ್ ವಿದ್ಯುತ್ ತಂತಿ ಮೇಲೆ ಇಂದು ಬೆಳಿಗ್ಗೆ ಮರವೊಂದು ಬುಡ ಸಹಿತ ಮಗುಚಿ ಬಿದ್ದಿದೆ. ಕನ್ಯಪ್ಪಾಡಿಯಲ್ಲಿ ರಶೀದ್ ಎಂಬವರ ಮನೆಯ ಮುಂಭಾಗದಲ್ಲಿ ಹಾದು ಹೋಗುವ ವಿದ್ಯುತ್ ತಂತಿ ಮೇಲೆ ಮರ ಬಿದ್ದಿದೆ. ಘಟನೆ ವೇಳೆ ಆ ಪರಿಸರದಲ್ಲಿ ಯಾರೂ ಇಲ್ಲದಿದ್ದುದರಿಂದ ಭಾರೀ ಅಪಾಯ ತಪ್ಪಿಹೋಗಿದೆ. ವಿಷಯ ತಿಳಿದು ತಲುಪಿದ ಕೆಎಸ್‌ಇಬಿ ನೌಕರರು ಮರವನ್ನು ತೆರವುಗೊಳಿಸಿದರು.