ದಂಪತಿಯನ್ನು ಕೊಲೆಗೈದು 100 ಪವನ್ ಚಿನ್ನ ದರೋಡೆ

ಚೆನ್ನೈ: ಕೇರಳೀಯ ದಂಪತಿ ಯನ್ನು ಕೊಲೆಗೈದು 100 ಪವನ್ ಚಿನ್ನಾಭರಣ ದರೋಡೆಗೈದ ಘಟನೆ ತಮಿಳುನಾಡಿನ ಮಾತ್ತಪುದುಪೇಟ ಎಂಬಲ್ಲಿ ನಡೆದಿದೆ. ನಾಟಿ ವೈದ್ಯನಾದ ಶಿವನ್ ನಾಯರ್, ಪತ್ನಿ ಪ್ರಸನ್ನ ಕು ಮಾರಿ (ಅಧ್ಯಾಪಿಕೆ) ಎಂಬಿವರು ಲೆಗೀಡಾದವ ರಾಗಿದ್ದಾರೆ. ದಂಪತಿ ಯ ಮನೆಯಿಂದ ೧೦೦ ಪವನ್ ಚಿನ್ನಾಭರಣ ಕಳವಿಗೀಡಾಗಿರುವುದಾಗಿ ತಿಳಿದು ಬಂದಿದೆ. ಮಾತ್ತಪುದುಪೇಟ ಗಾಂಧಿನಗ ರದಲ್ಲಿ  ಮನೆಗೆ ಹೊಂದಿಕೊಂಡು ಶಿವನ್ ನಾಯರ್ ಕ್ಲಿನಿಕ್ ನಡೆಸುತ್ತಿ ದ್ದರು. ರೋಗಿಗಳೆಂದು ತಿಳಿಸಿ ಅಲ್ಲಿಗೆ ತಲುಪಿದ್ದ  ಆರೋಪಿಗಳು ವೈದ್ಯ ಹಾಗೂ ಪತ್ನಿಯನ್ನು ಕೊಲೆಗೈದು ಚಿನ್ನಾಭರಣ ಕಳವು ನಡೆಸಿದ್ದಾರೆಂದು ತಿಳಿದುಬಂದಿದೆ. ಮನೆಯೊಳಗಿನ ಬೊಬ್ಬೆ ಕೇಳಿ ಬಂದ ಹಿನ್ನೆಲೆಯಲ್ಲಿ  ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು.

ಪೊಲೀಸರು ತಲುಪಿ ಪರಿಶೀಲಿಸಿದಾಗಲೇ ಘಟನೆ ಅರಿವಿಗೆ ಬಂದಿದೆ.  ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

You cannot copy contents of this page