ದಂಪತಿ ಮಧ್ಯೆಗಿನ ವಿವಾದ ಮಾತುಕತೆ ಮೂಲಕ ಬಗೆಹರಿಸಲು ನಿರಾಕರಿಸಿದ ದ್ವೇಷ: ಯುವಕನನ್ನು ತಡೆದು ನಿಲ್ಲಿಸಿ ಕೊಲೆಗೆತ್ನ: 5 ಮಂದಿ ವಿರುದ್ಧ ಕೇಸು
ಬದಿಯಡ್ಕ: ಪತಿ ಹಾಗೂ ಪತ್ನಿ ಮಧ್ಯೆಗಿನ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಲು ನಿರಾಕರಿಸಿದ ದ್ವೇಷದಿಂದ ಯುವಕನನ್ನು ತಂಡವೊಂದು ತಡೆದು ನಿಲ್ಲಿಸಿ ಹಲ್ಲೆಗೈದು ಕೊಲೆಗೆ ಯತ್ನಿಸಿದ ಬಗ್ಗೆ ದೂರಲಾಗಿದೆ.
ಬೇಳ ಮೇಲಿನ ನೀರ್ಚಾಲ್‌ನ ಜಯಶ್ರೀ ನಿಲಯದ ಬಿ. ಸೂರಜ್ (27)ರ ಮೇಲೆ ತಂಡ ಹಲ್ಲೆಗೈದಿದೆ. ಇವರು ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಐದು ಮಂದಿ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನೀರ್ಚಾಲು ಮಾಡತ್ತಡ್ಕದ ಕೆ. ಧೀರಜ್ (28), ನೆಕ್ರಾಜೆ ಚೂರಿಪಳ್ಳದ ಕೆ. ಸುದೀಶ್ (25), ಮಧೂರಿನ ಶೈಲೇಶ್ (20), ನೆಕ್ರಾಜೆ ನೆಲ್ಲಿಕಟ್ಟೆಯ ಸುಧೀಶ್ (24), ಮಧೂರಿನ ವಿಷ್ಣುಪ್ರಸಾದ್ (28) ಎಂಬಿವರ ವಿರುದ್ಧಕೇಸು ದಾಖಲಿಸಲಾಗಿದೆ.
ನಿನ್ನೆ ಸಂಜೆ ನೀರ್ಚಾಲ್‌ನಲ್ಲಿ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿತ್ತು. ಮಾರಕಾಯುಧ ಗಳೊಂದಿಗೆ ಕಾರಿನಲ್ಲಿ ತಲುಪಿದ ತಂಡ ಸೂರಜ್‌ನನ್ನು ತಡೆದು ನಿಲ್ಲಿಸಿ ಹಲ್ಲೆಗೈದಿದ್ದು, ಬಳಿಕ ಚಾಕುನಿಂದ ಇರಿದು ಕೊಲೆಗೈಯ್ಯಲು ಯತ್ನಿಸಿರುವುದಾಗಿ ಕೇಸು ದಾಖಲಿಸಲಾಗಿದೆ. ಈ ಪ್ರಕರಣದ ಎರಡನೇ ಆರೋಪಿ ಹಾಗೂ ಆತನ ಪತ್ನಿ ಮಧ್ಯೆ ಕೌಟುಂಬಿಕ ಸಮಸ್ಯೆ ಗಳಿವೆ ಯೆನ್ನಲಾಗುತ್ತಿದೆ. ಸೂರಜ್ ಪತ್ನಿಯ ತಾಯಿಯ ಸಹೋದರಿಯ ಮಗನಾಗಿದ್ದಾರೆ ಹಲ್ಲೆಗೀಡಾದ ಸೂರಜ್. ಕೌಟುಂಬಿಕ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಲು ಇವರು ಸಿದ್ಧರಾಗದ ದ್ವೇಷದಿಂದ ಹಲ್ಲೆನಡೆಸಿರುವುದಾಗಿ ಬದಿಯಡ್ಕ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ.