ದಲಿತ ಬಾಲಕಿಗೆ ಐದು ವರ್ಷದಿಂದ 64ಕ್ಕೂ ಹೆಚ್ಚು ಮಂದಿಯಿಂದ ಲೈಂಗಿಕ ದೌರ್ಜನ್ಯ: ಐವರ ಸೆರೆ
ಪತ್ತನಂತಿಟ್ಟ: ದಲಿತ ವಿಭಾಗಕ್ಕೆ ಸೇರಿದ ಬಾಲಕಿಗೆ ಕಳೆದ ಐದು ವರ್ಷಗಳಲ್ಲಾಗಿ ೬೪ಕ್ಕೂ ಹೆಚ್ಚು ಮಂದಿ ಲೈಂಗಿಕ ದೌರ್ಜನ್ಯವೆಸಗಿದ ಪೈಶಾಚಿಕ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಉಳಿದವರ ಪತ್ತೆಗಾಗಿ ಶೋಧಕ್ರಮ ಆರಂಭಿಸಲಾಗಿದೆ.
ಪತ್ತನಂತಿಟ್ಟ ಇಲವುಂತಿಟ್ಟ ನಿವಾಸಿ ಗಳಾದ ಸಂದೀಪ್, ವಿನೀತ್, ಸುಬಿನ್ ಸೇರಿ ಐದು ಮಂದಿ ಬಂಧಿತರಾಗಿದ್ದು, ಅವರನ್ನು ರಾನ್ನಿ ನ್ಯಾಯಾಲಯದ ನಿರ್ದೇಶ ಪ್ರಕಾರ ಬಳಿಕ ನ್ಯಾಯಾಂಗ ಬಂಧನದಲ್ಲಿರಿಸ ಲಾಗಿದೆ.
ಈಗ 18 ವರ್ಷ ಪೂರ್ಣಗೊಂಡಿ ರುವ ಈ ಬಾಲಕಿ ಕ್ರೀಡಾಪಟು ಕೂಡಾ ಆಗಿದ್ದಾಳೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಮಹಿಳಾ ಸಮಖ್ಯ ಸೊಸೈಟಿ ಕಾರ್ಯಕರ್ತೆಯರಲ್ಲಿ ತನಗೆ ಉಂಟಾದ ಲೈಂಗಿಕ ದೌರ್ಜನ್ಯ ಬಗ್ಗೆ ಬಾಲಕಿ ಮೊದಲು ಬಹಿರಂಗಪಡಿಸಿದ್ದಳು. ಅದರಂತೆ ಪ್ರಸ್ತುತ ಸೊಸೈಟಿ ಕಾರ್ಯಕರ್ತರು ಆ ಬಗ್ಗೆ ಜಿಲ್ಲಾ ಶಿಶು ಕಲ್ಯಾಣ ಸಮಿತಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಜಿಲ್ಲಾ ಶಿಶು ಕಲ್ಯಾಣ ಸಮಿತಿ ಸೈಕೋಲಜಿಸ್ಟ್‌ರ ಸಹಾಯದೊಂದಿಗೆ ಬಾಲಕಿಯನ್ನು ಕೌನ್ಸಿಲ್‌ಗೊಳ ಪಡಿಸಿ ದಾಗ ಆಕೆ ತನಗೆ ಉಂಟಾದ ಕಹಿ ಅನುಭವದ ಪೂರ್ಣ ಕಥೆಯನ್ನು ವಿವರಿಸಿದ್ದಾಳೆ.
2019ರಂದು ನನಗೆ 13 ವರ್ಷ ಪ್ರಾಯವಾದ ದಿನದಿಂದಲೇ ತನಗೆ ಲೈಂಗಿಕ ದೌರ್ಜನ್ಯ ಎದುರಿಸಬೇಕಾಗಿ ಬಂತು. ವಿವಾಹ ವಾಗ್ದಾನ ನೀಡಿ ನನ್ನ ಪ್ರಿಯತಮ ಮೊದಲ ಬಾರಿ ಲೈಂಗಿಕ ಕಿರುಕುಳ ನೀಡಿದ್ದನೆಂದು ಬಾಲಕಿ ಹೇಳಿಕೆಯಲ್ಲಿ ತಿಳಿಸಿದ್ದಾಳೆ. ನಂತರ ಪ್ರಿಯತಮ ಆಕೆಯನ್ನು ವಿವಿಧೆಡೆಗೆ ಕರೆದೊಯ್ದು ಅಲ್ಲೂ ದೌರ್ಜನ್ಯ ಮುಂದುವರಿಸಿದ. ಮಾತ್ರವಲ್ಲ ಆತ ನನ್ನ ನಗ್ನ ಫೋಟೋ ಹಾಗೂ ವೀಡಿಯೋ ಚಿತ್ರೀಕರಣ ನಡೆಸಿ ಅದನ್ನು ಆತನ ಸ್ನೇಹಿತರಿಗೂ ಕಳುಹಿಸಿಕೊಟ್ಟ. ಆ ದೃಶ್ಯಗಳನ್ನು ತೋರಿಸಿ ಆತನ ಸ್ನೇಹಿತರೂ ನನಗೆ ಕಿರುಕುಳ ನೀಡಿದರು. ಹೀಗೆ ಕಿರುಕುಳ ನೀಡಿದವರಲ್ಲಿ ಪೋಕ್ಸೋ ಪ್ರಕರಣವೊಂದಕ್ಕೆ ಸಂಬಂಧಿಸಿ ಜೈಲುವಾಸ ಅನುಭವಿಸಿದ್ದ ಓರ್ವ ಆರೋಪಿಯೂ ಒಳಗೊಂಡಿದ್ದಾನೆ. 13ರಿಂದ 18 ವರ್ಷವಾಗುವ ತನಕ 64ಕ್ಕೂ ಹೆಚ್ಚು ಮಂದಿ ತನಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಬಾಲಕಿ ಹೇಳಿಕೆಯಲ್ಲಿ ತಿಳಿಸಿದ್ದಾಳೆ. ಅದರಂತೆ ಪ್ರಕರಣ ದಾಖಲಿಸಿ, ಆರೋಪಿಗಳ ಪೈಕಿ ಐದು ಮಂದಿಯನ್ನು ಬಂಧಿಸಿ 10 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಉಳಿದ ಆರೋಪಿಗಳ ಪತ್ತೆಗಾಗಿರುವ ಶೋಧ ಕಾರ್ಯ ಮುಂದುವರಿಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.