ದಾಖಲುಪತ್ರಗಳಿಲ್ಲದೆ ಸಾಗಿಸುತ್ತಿದ್ದ ೧೪ ಲಕ್ಷ ರೂ., ಚಿನ್ನದ ಗಟ್ಟಿ ವಶ

ಕಾಸರಗೋಡು: ಸರಿಯಾದ ದಾಖ ಲುಪತ್ರಗಳಿಲ್ಲದೆ ಸಾಗಿಸುತ್ತಿದ್ದ ೧೪.೧೨ ಲಕ್ಷ ರೂ. ನಗದು ಮತ್ತು ಕರಗಿಸಿದ ರೂಪದಲ್ಲಿದ್ದ ಆರು ಚಿನ್ನದ ಗಟ್ಟಿಗಳನ್ನು ಕಾಸರಗೋಡು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಪಿ.ಅಜಿತ್ ಕುಮಾರ್ ನೇತೃತ್ವದ ಪೊಲೀಸರ ತಂಡ ನಗರದಿಂದ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.

ಈ ಸಂಬಂಧ ಈ ಮಾಲು ಕೈವಶವಿರಿಸಿಕೊಂಡಿದ್ದ ಕಾಸರಗೋಡು ತೆರುವತ್ ಹೊನ್ನೆಮೂಲೆ ಬಾವಿಕ್ಕೆರೆ  ಹೌಸ್‌ನ ಅಹಮ್ಮದ್ ಇರ್ಫಾನ್ (೩೦) ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.  ನಂತರ ಆತನ ಹೇಳಿಕೆಯನ್ನು ದಾಖಲಿಸಿಕೊಂ ಡು ಆತನನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ. 

ಕಾಸರಗೋಡು ನಗರದ ಪಳ್ಳಂನ ಲ್ಲಿರುವ ಕಾಸರಗೋಡು ಸ್ಪೆಷಲ್ ಸಬ್ ಜೈಲ್ ಬಳಿ ನಿನ್ನೆ ಪೊಲೀಸ್ ಈ ಕಾರ್ಯಾಚರಣೆ ನಡೆದಿದೆ. ಚಿನ್ನ ಮತ್ತು ನಗದು ಸಾಗಿಸುವ ಬಗ್ಗೆ ಇನ್‌ಸ್ಪೆಕ್ಟರ್ ಅಜಿತ್ ಕುಮಾರ್‌ರಿಗೆ ಗುಪ್ತ ಮಾಹಿತಿ ಲಭಿಸಿದೆ. ಅದರಂತೆ ಅವರ ನೇತೃತ್ವದಲ್ಲಿ ಜಿಲ್ಲಾ   ಪೊಲೀಸ್ ಅಧಿಕಾರಿ, ಸ್ಪೆಷಲ್ ಸ್ಕ್ವಾಡ್‌ನ ಪೊಲೀಸರಾದ ನಿಜಿನ್ ಕುಮಾರ್, ಎ.ವಿ. ರಜೀಶ್ ಕಾಟಾಂಬಳ್ಳಿ ಸೇರಿ ಸ್ಪೆಷಲ್ ಸಬ್ ಜೈಲ್ ಬಳಿ ನಿನ್ನೆ  ಕಾರ್ಯಾಚರಣೆ  ನಡೆಸಲಾಗಿದೆ. ಅಹ ಮ್ಮದ್ ಇರ್ಫಾನ್  ಕೈಯಲ್ಲಿ ಪ್ಲಾಸ್ಟಿಕ್ ಚೀಲ ಕೈವಶವಿರಿಸಿಕೊಂಡಿರುವುದು ಗಮನಿಸಿ ಶಂಕೆಗೊಂಡ ಪೊಲೀಸರು   ವಶಪಡಿ ಸಿ ತಪಾಸಣೆಗೊಳಪಡಿಸಿದಾಗ ಅದರಲ್ಲಿ ೧೪,೧೨,೮೦೦ ರೂ. ನಗದು ಮತ್ತು ಕರಗಿಸಿದ ೧೦ ಚಿನ್ನದ ಗಟ್ಟಿಗಳು, ಒಂದು ರಿಂಗ್ (ಒಟ್ಟು ೯೬೯.೨೮೦ ಗ್ರಾಂ) ಪತ್ತೆಯಾಗಿದೆ. ಆದರೆ ಅದಕ್ಕೆ ಆತನ ಬಳಿ ಸರಿಯಾದ   ದಾಖಲುಪತ್ರ ಗಳು ಇದ್ದಿರಲಿಲ್ಲ.  ಬಳಿಕ ಆತ ಸಹಿತ ಮಾಲನ್ನು ವಶಪಡಿಸಲಾಗುವುದು.   ೫೦೦ ರೂ., ೨೦೦ ರೂ. ಮತ್ತು ೧೦೦ ರೂ.ಗಳ ಹಲವು ಕಟ್ಟುಗಳು ವಶಪಡಿ ಸಲಾದ ಹಣದಲ್ಲಿ ಒಳಗೊಂಡಿದೆ ಯೆಂದೂ ಪೊಲೀಸರು ತಿಳಿಸಿದ್ದಾರೆ. ಪೊಲೀಸರ ವಶಕ್ಕೊಳ ಗಾದ ಅಹಮ್ಮದ್ ಇರ್ಫಾನ್ ನಗರದ ಪಳ್ಳಂ ರಸ್ತೆ ಬಳಿಯ ಚಿನ್ನದಂ ಗಡಿಯೊಂದನ್ನು ನಡೆಸುತ್ತಿದ್ದಾನೆ. ಚಿನ್ನ ಮತ್ತು ನಗದು ವಶಕ್ಕೆ ಸಂಬಂಧಿಸಿದ ಈ ಪ್ರಕರಣದ ಬಗ್ಗೆ ಮುಂದಿನ ಹಂತದ ತನಿಖೆ ನಡೆಸಲಾಗುವುದೆಂದೂ ಪೊಲೀಸರು ತಿಳಿಸಿದ್ದಾರೆ. ಈ ಮಾಲು ವಶಪಡಿಸಿದ ಬಗ್ಗೆ ಎನ್‌ಫೋರ್ಸ್‌ಮೆಂಟ್ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಗೂ ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page