ದಾದಿ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ಖಾಸಗಿ ಆಸ್ಪತ್ರೆಯ ದಾದಿಯೋರ್ವೆ ಹಾಸ್ಟೆಲ್‌ನಲ್ಲಿ  ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಂದ್ಯೋಡಿನ ಡಿ.ಎಂ. ಆಸ್ಪತ್ರೆಯ ದಾದಿ ಕೊಲ್ಲಂ ತೆನ್ಮಲ ನಿವಾಸಿಯಾದ ಸ್ಮೃತಿ (20) ಮೃತ ಯುವತಿ. ಆಸ್ಪತ್ರೆಯ ಹಿಂಭಾಗದಲ್ಲಿರುವ ಹಾಸ್ಟೆಲ್‌ನಲ್ಲಿ ಸ್ಮೃತಿ ವಾಸಿಸುತ್ತಿದ್ದರು.

ಕೊಠಡಿಯಲ್ಲಿ ಸ್ಮೃತಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೊನ್ನೆ ರಾತ್ರಿ ಕೆಲಸ ಮುಗಿಸಿ ನಿನ್ನೆ ಬೆಳಿಗ್ಗೆ ಹಾಸ್ಟೆಲ್ ಕೊಠಡಿಗೆ ಮರಳಿದ್ದರು. ಅನಂತರ ಮತ್ತೆ ಆಸ್ಪತ್ರೆಗೆ ತೆರಳಿದ ಅವರ ಮಧ್ಯಾಹ್ನ ವೇಳೆ ಕೊಠಡಿಗೆ ಬಂದು ನೇಣು ಬಿಗಿದಿರಬಹುದೆಂದು ಅಂದಾಜಿಸಲಾಗಿದೆ. ಮೂರು ತಿಂಗಳ ಹಿಂದೆಯಷ್ಟೆ ಸ್ಮೃತಿ ಇಲ್ಲಿ ಕೆಲಸಕ್ಕೆ ಸೇರ್ಪಡೆಗೊಂಡಿದ್ದರು. ಮೃತರು ತಾಯಿ ಶಾನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page