ದುಬಾಯಿಯಿಂದ ಕಳುಹಿಸಿಕೊಟ್ಟ ಚಿನ್ನ ನೀಡದ ಆರೋಪ: ಯುವಕನನ್ನು ಅಪಹರಿಸಿ ದೌರ್ಜನ್ಯ; ನಾಲ್ವರ ಬಂಧನ

ಕಾಸರಗೋಡು: ದುಬಾಯಿ ಯಿಂದ ಕಳುಹಿಸಿಕೊಡಲಾಗಿದ್ದ ಚಿನ್ನವನ್ನು ನೀಡಲಾಗಿಲ್ಲವೆಂದು ಆರೋಪಿಸಿ ಯುವಕನನ್ನು ಕಾರಿನಲ್ಲಿ ಅಪಹರಿಸಿ ದಿಗ್ಬಂಧನದಲ್ಲಿರಿಸಿ ಆತನ ಮೇಲೆ ದೌರ್ಜನ್ಯವೆಸಗಿದ ಪ್ರಕರಣದ ನಾಲ್ವರು ಆರೋಪಿಗಳನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ.

 ಬೇಕಲ ಸಮೀಪದ ಚಿತ್ತಾರಿಯ ಅಶ್ರಫ್ (ಅಚ್ಚು 35), ಸುಫಾರಿ ತಂಡಕ್ಕೆ ಸೇರಿದವರೆನ್ನಲಾದ ಪಿ.ಕೆ. ಶಾಹೀರ್ (21), ಇಬ್ರಾಹಿಂ ಖಲೀಲ್ (೩೩), ಪಡನ್ನದ ಪಿ.ಸಿ. ಯಸರ್ (40) ಎಂಬವರು ಬಂಧನಕ್ಕೊಳಗಾದ ಆರೋ ಪಿಗಳು. ಇವರನ್ನು ನಂತರ ಹೊಸದುರ್ಗ ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

ಬೇಕಲ ಪೂಚಕ್ಕಾಡ್ ಮಸೀದಿ ರಸ್ತೆ ಬಳಿಯ ರೈಫಾ ಮಂಜಿಲ್‌ನ ಎ.ಪಿ. ಅಬ್ದುಲ್  ಮಜೀದ್ 40) ಎಂಬವರು ನೀಡಿದ ದೂರಿನಂತೆ ಈ ನಾಲ್ವರ ವಿರುದ್ಧ ಬೇಕಲ ಪೊಲೀಸರು ಈ ಪ್ರಕರಣ ದಾಖ ಲಿಸಿಕೊಂಡು ಅವರನ್ನು ಬಂಧಿಸಿದ್ದಾರೆ.

ದುಬಾಯಿಯಿಂದ ಕಳುಹಿಸಿಕೊಟ್ಟ ಚಿನ್ನವನ್ನು ಹಿಂತಿರುಗಿಸಲಿಲ್ಲವೆಂದು ಆರೋಪಿಸಿ ಕಾರಿನಲ್ಲಿ ಬಂದ ಆರೋಪಿಗಳು ಕಳೆದ ಆದಿತ್ಯವಾರ ತನ್ನನ್ನು ಮನೆಯಿಂದ ಕರೆದು ಬಲವಂತವಾಗಿ ಅವರ ಕಾರಿಗೇರಿಸಿ ಪಡನ್ನದ ರೆಸೋರ್ಟ್‌ವೊಂದಕ್ಕೆ ಸಾಗಿಸಿ ಚಿನ್ನ ನೀಡು ಅಥವಾ ಅದರ ಹಣ ನೀಡು, ಇಲ್ಲವಾದಲ್ಲಿ ನಿನ್ನ ಮನೆಯನ್ನು ನಮ್ಮ ಹೆಸರಲ್ಲಿ  ನೋಂದಾವಣೆ ಮಾಡಿ ನೀಡುವಂತೆ ಹೇಳಿ ತನ್ನ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಯ ನೋವು ತಡೆಯಲು ಅಸಾಧ್ಯವಾದಾಗ ಹಣವನ್ನು ಪೇರಾಂಬ್ರದಲ್ಲಿರುವ ತನ್ನ ಸ್ನೇಹಿತನಿಂದ ಪಡೆದು ನೀಡುವುದಾಗಿ ನಾನು ಅವರಲ್ಲಿ ತಿಳಿಸಿದ್ದೆ. ಅದರಂತೆ ಆರೋಪಿಗಳು ಕಾರಿನಲ್ಲಿ  ತನ್ನನ್ನು ಪೇರಾಂಬ್ರಕ್ಕೆ ಸಾಗಿಸುವ ದಾರಿ ಮಧ್ಯೆ ಕಾರಿನಿಂದ ತಪ್ಪಿಸಿಕೊಂಡು ಪೇರಾಂಬ್ರ ಪೊಲೀಸ್ ಠಾಣೆಗೆ ಹೋದುದರಿಂದ ನಾನು ಬಜಾವಾದೆ ಎಂದು ಮಜೀದ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಅದರಂತೆ ಪೇರಾಂಬ್ರ ಪೊಲೀಸರು ನೀಡಿದ ಮಾಹಿತಿಯಂತೆ ಬೇಕಲ ಪೊಲೀಸರು  ಪೇರಾಂಬ್ರಕ್ಕೆ ಸಾಗಿ ಅಲ್ಲಿಂದ ಮಜೀದ್‌ನನ್ನು ಸುರಕ್ಷಿತವಾಗಿ ಆತನ ಮನೆಗೆ ತಲುಪಿಸಿದ ಬಳಿಕ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page