ದುಬಾ ಬೀಚ್‌ನಲ್ಲಿ ಮುಳುಗಿ ಚೆಂಗಳದ ಬಾಲಕ ಮೃತ್ಯು
ಕಾಸರಗೋಡು: ದುಬಾಯ ಮಂಜಾರ್ ಬೀಚ್‌ನಲ್ಲಿ ಆಟವಾಡು ತ್ತಿದ್ದ ವೇಳೆ ಚೆಂಗಳ ನಿವಾಸಿಯಾ ಗಿರುವ ಬಾಲಕ ಸಮುದ್ರದಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಚೆಂಗಳ ನಿವಾಸಿ ಹಾಗೂ ದುಬಾ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಯಾದ ಅಹಮ್ಮದ್ ಅಬ್ದುಲ್ಲ ಮಫಾಸ್ (15) ಸಾವನ್ನಪ್ಪಿದ ಬಾಲಕ.
ದುಬಾಯಲ್ಲಿ ರೆಡಿಮೇಡ್ ಉಡುಪುಗಳ ರಖಂ ವ್ಯಾಪಾರಿ ಚೆಂಗಳ ನಿವಾಸಿ ಮುಹಮ್ಮದ್ ಅಶ್ರಫ್- ನಸೀಮಾ ದಂಪತಿ ಪುತ್ರನಾಗಿದ್ದಾನೆ ಮೃತ ಮಫಾಸ್. ಮೂರು ವರ್ಷಗಳ ಹಿಂದೆ ಅಶ್ರಫ್ ತಮ್ಮ ಕುಟುಂಬದ ಸಮೇತ ದುಬಾಯಲ್ಲಿ ವಾಸಿಸತೊಡಗಿದ್ದರು. ರಜಾದಿನ ಆಚರಿಸಲೆಂದು ಕಳೆದ ಶುಕ್ರವಾರ ಮುಹಮ್ಮದ್ ಅಶ್ರಫ್ ಪತ್ನಿ ಮತ್ತು ಮಕ್ಕಳೊಂದಿಗೆ ಬೀಚ್‌ಗೆ ಹೋಗಿದ್ದರು. ಮಫಾಸ್ ಸಮುದ್ರ ದಲ್ಲಿ ಆಟವಾಡುತ್ತಿದ್ದ ವೇಳೆ ಸಮುದ್ರದ ಅಲೆಗೆ ಸಿಲುಕಿ ಆತ ನಾಪ ತ್ತೆಯಾಗಿದ್ದನು. ಬಳಿಕ ನಡೆಸಿದ ಶೋಧ ವೇಳೆ ಶನಿವಾರ ರಾತ್ರಿ ಆತನ ಮೃತದೇಹ ಪತ್ತೆಯಾಗಿದೆ. ಮೃತ ಬಾಲಕ ಹೆತ್ತವರ ಹೊರತಾಗಿ ಸಹೋದರರಾದ ಮುಹೀಸ್, ಮಾಸಿನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ. ಮೃತದೇಹದ ಅಂತ್ಯ ಸಂಸ್ಕಾರ ದುಬಾಯಲ್ಲೇ ನಡೆಸಲಾಯಿತು.