ದುರಸ್ತಿಯಾಗದೆ ಮುಗಿಯಿತು ಹತ್ತು ವರ್ಷ : ಕೊಮ್ಮಂಗಳ ರಸ್ತೆಯಲ್ಲಿ ಸಂಚಾರ ನರಕಯಾತನೆ

ಪೈವಳಿಕೆ: ಕಳೆದ ಹತ್ತು ವರ್ಷಗಳಿಂದ ಶೋಚನೀಯಾವ ಸ್ಥೆಯಲ್ಲಿರುವ ಕೊಮ್ಮಂಗಳ-ಚಿಪ್ಪಾರು-ಪೆರ್ಲ ರಸ್ತೆಯನ್ನು ದುರಸ್ತಿಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಪೈವಳಿಕೆ ಪಂ.ನ ಎರಡನೇ ವಾರ್ಡ್‌ನಲ್ಲಿರುವ ಈ ರಸ್ತೆ ಸುಮಾರು ಮೂರು ಕಿಲೋ ಮೀಟರ್ ಉದ್ದವಿದೆ.  ಇದರಲ್ಲಿ ಎರಡು ಬಾರಿಯಾಗಿ ಒಟ್ಟು ೨೦೦ ಮೀಟರ್ ಡಾಮರೀಕರಣ ನಡೆಸಲಾ ಗಿದೆ. ಉಳಿದ ರಸ್ತೆ ಹಾಗೇ ಉಳಿದಿದ್ದು, ಈಗ ಡಾಮರೀಕgಣಗೊಳಿಸಿದ ರಸ್ತೆಯೂ ಹಾನಿಗೊಂಡಿದೆ. ಇದರಿಂ ದಾಗಿ ಈ ರಸ್ತೆಯಲ್ಲಿ ಸಂಚಾರವೇ ದುಸ್ತರವಾಗಿ ದೆ. ರಸ್ತೆ ದುರಸ್ತಿ ಬಗ್ಗೆ ಗ್ರಾಮಸಭೆಗಳಲ್ಲಿ ಒತ್ತಾಯಿಸಿದರೂ ಇದುವರೆಗೂ ಯಾವುದೇ ಕ್ರಮ ಉಂಟಾಗಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶೀಘ್ರ ದುರಸ್ತಿಗೆ ಕ್ರಮ ಉಂಟಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page