ದುರಸ್ತಿ ಕೆಲಸಕ್ಕೆ ಬಂದ ವಿದ್ಯುನ್ಮಂಡಳಿ ಅಧಿಕಾರಿ, ಪೊಲೀಸರ ಮೇಲೆ ಹಲ್ಲೆ: ಮೂವರ ಸೆರೆ

ಕಾಸರಗೋಡು: ದುರಸ್ತಿ ಕೆಲಸ ನಡೆಸಲು ಬಂದ ವಿದ್ಯುನ್ಮಂಡಳಿ ಅಧಿಕಾರಿಗಳು ಮತ್ತು ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಮೂವರನ್ನು ನೀಲೇಶ್ವರ ಪೊಲೀಸರು ಬಂಧಿಸಿದ್ದಾರೆ.

ನೀಲೇಶ್ವರ ತೈಕೇಕಡಪ್ಪುರಂ ಪರಿಸರ ನಿವಾಸಿಗಳಾದ ಶಾಜಿ, ದಿನೂಪ್, ಸುಮಂತ್ ಬಂಧಿತ ರಾದ ಆರೋಪಿಗಳು. ತೈಕೇ ಕಡಪ್ಪುರ ಕಾಲನಿ ಜಂಕ್ಷನ್‌ನಲ್ಲಿ ವಿದ್ಯುತ್ ಲೈನ್‌ನ ಜಂಪರ್‌ಗೆ ಬೆಂಕಿ ತಗಲಿದುದರಿಂದ ವಿದ್ಯುತ್ ಸರಬರಾಜು ಮೊಟಕುಗೊಂಡಿತ್ತು. ಅದರ ದುರಸ್ತಿ ಕೆಲಸಕ್ಕಾಗಿ ತಲುಪಿದ ವಿದ್ಯುತ್ ಕಚೇರಿಯ ಸಬ್ ಇಂಜಿನಿಯರ್ ಪಿ.ವಿ. ಶಶಿ, ಓವರ್‌ಸೀಯರ್ ಕೆ.ಸಿ. ಶ್ರೀಜನ್, ಲೈನ್‌ಮ್ಯಾನ್‌ಗಳಾದ ಪಿ.ವಿ. ಪವಿತ್ರನ್ ಮತ್ತು ಅಶೋಕನ್ ಮೇಲೆ ಆರೋಪಿಗಳು ಕಾರಿನಲ್ಲಿ ಬಂದು ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಗಾಯಗೊಂಡ ಈ ನಾಲ್ವರನ್ನು ಬಳಿಕ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ವೇಳೆ ನೀಲೇಶ್ವರ ಪೊಲೀಸರು ಘಟನೆ ಸ್ಥಳಕ್ಕೆ ಆಗಮಿಸಿದಾಗ ಆರೋಪಿಗಳು ಅವರ ಮೇಲೂ ಹಲ್ಲೆ ನಡೆಸಿರು ವುದಾಗಿ ಆರೋಪಿಸಲಾಗಿದೆ.

RELATED NEWS

You cannot copy contents of this page