ದೇಶದ ಅತ್ಯಂತ ಉದ್ದವಾದ ಮೂರನೇ ಭೂಗರ್ಭ ಮಾರ್ಗ ವಯನಾಡ್‌ನಲ್ಲಿ : ಕೇಂದ್ರದ ಅನುಮತಿ
ಕಲ್ಲಿಕೋಟೆ: ವಯನಾಡ್- ಕಲ್ಲಿಕೋಟೆ ಜಿಲ್ಲೆಗಳನ್ನು ಜೋಡಿಸುವ ಆನಕ್ಕಾಂಪೊಯಿಲ್- ಕಳ್ಳಾಡಿ- ಮೇಪಾಡಿ ಸುರಂಗ ಮಾರ್ಗವನ್ನು ವ್ಯವಸ್ಥೆಗಳನ್ನು ಪಾಲಿಸಿಕೊಂಡು ಜ್ಯಾರಿಗೊಳಿಸಲು ಕೇಂದ್ರ ಸರಕಾರ ಅನುಮತಿ ನೀಡಿದೆ. 60 ಷರತ್ತು ಗಳೊಂದಿಗೆ ಕೇಂದ್ರ ನೈಸರ್ಗಿಕ ಸಚಿವಾಲಯದ ಅಧೀನದ ತಜ್ಞ ಸಮಿತಿ ಯೋಜನೆ ಜ್ಯಾರಿಗೊಳಿಸಲು ಶಿಫಾರಸು ನೀಡಿದೆ. ಮೇ 14, 15ರಂದು ಜರಗಿದ ಸಮಿತಿ ಸಭೆಯಲ್ಲಿ ಈ ತೀರ್ಮಾನ ಉಂಟಾಗಿದೆ. ಆದರೆ ವ್ಯವಸ್ಥೆಗಳು ಏನು ಎಂಬ ಬಗ್ಗೆ ಬಹಿರಂಗಗೊಂಡಿಲ್ಲ.
ನಿರ್ಮಾಣ ಚಟುವಟಿಕೆಗಳನ್ನು ಮುಂದುವರಿಸಲು ಈ ತೀರ್ಮಾನ ದಿಂದ ರಾಜ್ಯ ಸರಕಾರಕ್ಕೆ ಸಾಧ್ಯವಾU ಲಿದೆ. ದೇಶದ ಅತ್ಯಂತ ಉದ್ದವಿರುವ ಮೂರನೇ ಭೂಗರ್ಭ ಮಾರ್ಗವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.
ಈ ಮೊದಲು ಪರಿಸರ ಹಾನಿ ಸಮಸ್ಯೆ ಮುಂದಿಟ್ಟು ಹಲವು ಬಾರಿ ಕೇಂದ್ರ ಸರಕಾರ ರಾಜ್ಯಸರಕಾರದಿಂದ ಹೆಚ್ಚಿನ ವಿವರಣೆಗಳನ್ನು ಕೇಳಿತ್ತು. 1800 ಕೋಟಿ ರೂ. ಯೋಜನೆಗೆ ವೆಚ್ಚ ನಿರೀಕ್ಷಿಸ ಲಾಗಿದೆ. ಆದರೆ ಈಗ ಇದಕ್ಕೂ ಹೆಚ್ಚು ಮೊತ್ತ ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ. ಕೊಂಕಣ್ ರೈಲ್ವೇ ಕಾರ್ಪೊರೇಶನ್ ಯೋಜನೆಯ ದಾಖಲೆ (ಡಿಪಿಆರ್)ಯನ್ನು ಸಿದ್ಧಪಡಿಸಿದೆ. ಈಗಾಗಲೇ ಯೋಜನೆಗಿರುವ ಭೂಮಿ ವಶ ಕಾರ್ಯ ೮೦ ಶೇಕಡವೂ ಪೂರ್ತಿಯಾಗಿದೆ.