ದೇಹದಾರ್ಢ್ಯ ಪಟು ನೇಣು ಬಿಗಿದು ಸಾವು

ಮಲಪ್ಪುರಂ: ದೇಹದಾರ್ಢ್ಯ ಪಟುವಾದ ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಕೊಂಡೋಟಿ ಕೋಟಪ್ಪುರಂ  ಅಂದಿಯೂರ್‌ಕುನ್ನು ವೆಳ್ಳಾರತ್ತೋಡಿ ನಿವಾಸಿ ಮುಹಮ್ಮದ್ ಕುಟ್ಟಿ ಎಂಬವರ ಪುತ್ರ ಯಾಸಿರ್ ಅರಾಫತ್ (34) ಮೃತ ಯುವಕ.  ನಿನ್ನೆ ಬೆಳಿಗ್ಗೆ ಮನೆಯಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಇವರು ಪತ್ತೆಯಾಗಿದ್ದಾರೆ. ಜಿಲ್ಲಾ, ರಾಜ್ಯ ಮಟ್ಟದಲ್ಲಿ ನಡೆದ ವಿವಿಧ ದೇಹದಾರ್ಢ್ಯ ಚಾಂಪಿಯನ್‌ಶಿಪ್‌ಗಳಲ್ಲಿ ಭಾಗವಹಿಸಿ ಗೆಲುವು ಸಾಧಿಸಿದ್ದರು. ಇವರು ಈ ಹಿಂದೆ ಮಿಸ್ಟರ್ ಕೇರಳ ಪ್ರಶಸ್ತಿ ಗೆದ್ದುಕೊಂಡಿದ್ದರು.

You cannot copy contents of this page