ದೈವ ನರ್ತಕ ನಿಧನ
ಮಂಜೇಶ್ವರ: ವರ್ಕಾಡಿ ಮರಿಕಾಪು ನಿವಾಸಿ ಹಿರಿಯ ದೈವ ನರ್ತಕ ಕಿಟ್ಟು (66) ನಿಧನರಾದರು. ಅರಿಬೈಲು ಶ್ರೀ ನಾಗಬ್ರಹ್ಮ ದೇವರ ಬೆಮ್ಮೆರೆ ಮುಡಿ ದೈವದ ನಿಷ್ಠೆಯ ದೈವನರ್ತಕರಾಗಿದ್ದರು. ಮೃತರು ಪತ್ನಿ ಲಕ್ಷ್ಮೀ, ಮಕ್ಕಳಾದ ಪ್ರಶಾಂತ್, ಪ್ರವೀಣ್, ಪ್ರಮೀಳಾ, ಅಳಿಯ ಅಶೋಕ ಮಧೂರು, ಸೊಸೆಯಂದಿರಾದ ದಿವ್ಯ, ಗಾಯತ್ರಿ, ಸಹೋದರ ಐತ್ತಪ್ಪ ಮರಿಕಾಪು, ಸಹೋದರಿ ಪುಷ್ಪ ಸುರುಳಿಮೂಲೆ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.