ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್‌ಗೆ ಬಲಿ: ನಾಲ್ವರು ಪರಾರಿ

ಕಾಸರಗೋಡು: ಪಶ್ಚಿಮ ತಪ್ಪಲಿನ ಅರಣ್ಯದಂಚಿನ ಪ್ರದೇಶಗ ಳಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ತೀವ್ರಗೊಂಡಿ ರುವಂತೆಯೇ ಈ ಮಧ್ಯೆ  ಉಡುಪಿ ಜಿಲ್ಲೆಯ ಹೆಬ್ರಿ ಪೊಲೀಸ್ ಠಾಣೆ ವ್ಯಾಪ್ತಿಗೊ ಳಪಟ್ಟ ಕಬ್ಬಿನಾಲೆಯಲ್ಲಿ ನಕ್ಸಲ್ ನಿಗ್ರಹ ಪಡೆ ನಡೆಸಿದ ಎನ್‌ಕೌಂಟರ್‌ನಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡನನ್ನು ಹತ್ಯೆಗೈಯ್ಯಲಾಗಿದೆ. ಈ ವೇಳ ಆತನ ಜತೆಗಿದ್ದ  ನಾಲ್ವರು ನಕ್ಸಲರು ಅಲ್ಲಿಂದ ಪರಾರಿಯಾಗಿದ್ದಾರೆ. 

ಹೀಗೆ ಪರಾರಿಯಾದವರಲ್ಲಿ ಒಳ ಗೊಂಡಿದ್ದ ನಕ್ಸಲ್ ನಾಯಕಿ ಸುಂದರಿಗೆ ಗುಂಡೇಟು ತಗಲಿರುವುದಾಗಿ ಹೇಳಲಾ ಗುತ್ತಿದೆ. ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಯ ದಟ್ಟಾರಣ್ಯ ಗ್ರಾಮಗಳಲ್ಲೂ ನಕ್ಸಲ್ ಚಟುವಟಿಕೆ ಮತ್ತೆ ತೀವ್ರಗೊಂಡಿದೆ. ಆ ಹಿನ್ನೆಲೆಯಲ್ಲಿ ಅಂತಹ ಪ್ರದೇಶ ಗಳಲ್ಲಿ ನಕ್ಸಲ್ ನಿಗ್ರಹ ಪಡೆ ಕಳೆದ ಕೆಲವು ದಿನಗಳಿಂದ ಕಾರ್ಯಾಚರಣೆ  ತೀವ್ರಗೊಳಿಸಿತ್ತು. ಅದರಂತೆ ಉಡುಪಿ ಜಿಲ್ಲೆಯ ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ ನಿನ್ನೆ ರಾತ್ರಿ ನಡೆಸಲಾದ ಎನ್‌ಕೌಂಟರ್‌ನಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡನನ್ನು ಹತ್ಯೆಗೈಯ್ಯಲಾಗಿದೆ. ವಿಕ್ರಂ  ಕಬ್ಬಿನಾಲೆ ಮೂಲದವನಾ ಗಿದ್ದಾನೆ.

ವಿಕ್ರಂಗೌಡ ನಕ್ಸಲ್ ನೇತಾರ  ನಾಗಿದ್ದಾನೆ. ಇತ್ತೀಚೆಗೆ ಕೆಲವು ದಿನಗಳ ಹಿಂದೆ ದಕ್ಷಿಣಕನ್ನಡ ಜಿಲ್ಲೆಯ ಕಡಬ, ಸುಳ್ಯ ಭಾಗಗಳಲ್ಲಿ ನಕ್ಸಲ್ ಭೇಟಿ ನೀಡಿದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಅದೇ ರೀತಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ನಕ್ಸಲ್‌ರು ಭೇಟಿ ನೀಡಿದ  ಬಗ್ಗೆಯೂ ಸುಳಿವು ಲಭಿಸಿತ್ತು.  ದಿನಗಳ ಹಿಂದೆ ಕೊಪ್ಪ ತಾಲೂಕಿನ ಕಡೆಗುಂಡಿ ಗ್ರಾಮದ ಸುಬ್ಬೇಗೌಡ ಎಂಬವರ ಮನೆಯಲ್ಲಿ ಮೂರು ಬಂದೂಕುಗಳು ಪತ್ತೆಯಾಗಿದ್ದವು. ಆ ಮನೆಗೆ ನಕ್ಸಲ್ ನಾಯಕಿ   ಮುಂಡುಗಾರು ಲತ ಸೇರಿದಂತೆ ನಾಲ್ವರು ನಕ್ಸಲರು ಆಕೆಯ   ನೀಡಿರುವ ಬಗ್ಗೆಯೂ ಸುಳಿವು ಲಭಿಸಿತ್ತು.

ಈ ಮಧ್ಯೆ ನಿನ್ನೆ ರಾತ್ರಿ ಹೆಬ್ರಿ  ಪೀತಬೈಲ್‌ನಲ್ಲಿ ನಕ್ಸಲ್ ನಿಗ್ರಹ ತಂಡ ನಡೆಸಿದ ಕೊಂಬಿಂಗ್‌ನಲ್ಲಿ ವಿಕ್ರಂಗೌಡ ನೇತೃತ್ವದ ನಕ್ಸಲರ ತಂಡ ಮುಖಾಮುಖಿಯಾಗಿದ್ದು ಆಗ ನಡೆದ ಗುಂಡಿನ ಚಕಮಕಿಯಲ್ಲಿ ವಿಕ್ರಂ  ಗೌಡ ಸಾವನ್ನಪ್ಪಿದ್ದಾನೆ. ಆ ವೇಳೆ ಆತನ ಜತೆಗಿದ್ದ ಸುಂದರಿಗೆ ಗುಂಡೇಟು ತಗಲಿದೆ ಎನ್ನಲಾಗಿದೆ. ಮಾತ್ರವಲ್ಲ  ಜಯಣ್ಣ, ಜಿಷ ಮತ್ತು ಇನ್ನೋರ್ವ  ಸೇರಿ ನಾಲ್ವರು   ವಿಕ್ರಂ ಗೌಡನ ಜತೆಗಿದ್ದರೆನ್ನಲಾಗಿದೆ. ಅವರು ಆ ವೇಳೆ ಪರಾರಿಯಾಗಿದ್ದಾರೆ. ಅವರ ಪತ್ತೆಗಾಗಿ ನಕ್ಸಲ್ ನಿಗ್ರಹಪಡೆ ಶೋಧ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಿದೆ.

Leave a Reply

Your email address will not be published. Required fields are marked *

You cannot copy content of this page