ನಗರದಲ್ಲಿ ಬೈಕ್ ಕಳವು
ಕಾಸರಗೋಡು: ನಗರದ ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ನಿಲುಗಡೆಗೊಳಿಸಲಾಗಿದ್ದ ಬೈಕ್ ಕಳವುಗೈಯ್ಯಲ್ಪಟ್ಟಿರುವುದಾಗಿ ಕಾಸರಗೋಡು ಪೊಲೀಸರಿಗೆ ದೂರು ನೀಡಲಾಗಿದೆ. ಕೇಳುಗುಡ್ಡೆಯ ಪ್ರವೀಣ್ ಕುಮಾರ್ (45) ಈ ಬಗ್ಗೆ ದೂರು ನೀಡಿದ್ದು, ಅದರಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮಾರ್ಚ್ 10 ಮತ್ತು 12ರ ದಿನದ ನಡುವೆ ಕಳವು ಗೈಯ್ಯಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದೇ ರೀತಿ ನಗರದ ಕೋಟೆಕಣಿಯ ಕ್ವಾರ್ಟರ್ಸ್ ಒಂದರ ಬಳಿಯಿಂ ದಲೂ ಮೊನ್ನೆ ಬೈಕೊಂದು ಕಳವುಹೋಗಿತ್ತು.