ಕೊಚ್ಚಿ: ಎರ್ನಾಕುಳಂ ಮುನಂಬತ್ ಎಂಬಲ್ಲಿ ೪೫ರ ಹರೆಯದ ಯುವಕ ಜೊತೆಗಾತಿ ಯನ್ನು ನಡು ರಸ್ತೆಯಲ್ಲಿ ಇರಿದು ಕೊಲೆಗೈದಿದ್ದಾನೆ. ಪಳ್ಳಿಪುರಂ ನಿವಾಸಿ ತೈಪರಂಬಿಲ್ ಸುರೇಶ್ ತನ್ನ ಜೊತೆಯಲ್ಲಿ ವಾಸಿಸುತ್ತಿದ್ದ ಪನಂಬಳ್ಳಿ ನಗರ ನಿವಾಸಿ ಪ್ರೀತಿ (43)ಳನ್ನು ಕೊಲೆಗೈದಿದ್ದಾನೆ. ಕೊಲೆ ಬಳಿಕ ಈತ ಮುನಂಬಂ ಪೊಲೀಸ್ ಠಾಣೆಯಲ್ಲಿ ಹಾಜರಾಗಿದ್ದಾನೆ.