ನದಿಗಳಿಂದ ಹೊಯ್ಗೆ ಸಂಗ್ರಹ: ಪ್ರಕೃತಿ ಸಮಸ್ಯೆಗೆ ಕಾರಣವಾಗಲಿದೆ- ಹವಾಮಾನ ಇಲಾಖೆ

ಕಾಸರಗೋಡು: ರಾಜ್ಯದ ಎಂಟು ಜಿಲ್ಲೆಗಳಲ್ಲಿರುವ ನದಿಗಳಿಂದ ಹೊಯ್ಗೆ ಗಣಿಗಾರಿಕೆ ಪುನರಾರಂಭಿಸಲಿರುವ ರಾಜ್ಯ ಸರಕಾರದ ಕಂದಾಯ ಇಲಾಖೆಯ ಘೋಷಣೆ ಗಂಭೀರ ಪ್ರಾಕೃತಿಕ ಸಮಸ್ಯೆಗಳಿಗೆ ಕಾರಣವಾಗಲಿದೆಯೆಂದು ಹವಾಮಾನ ನಿರೀಕ್ಷಣಾ ಕೇಂದ್ರ ಮೂಲಗಳು ತಿಳಿಸಿವೆ.

ವೈಜ್ಞಾನಿಕ ರೀತಿಯ ಅಧ್ಯಯನ ನಡೆಸದೆ ಗಣಿಗಾರಿಕೆ ಆರಂಭಿಸಕೂಡದು. ಪ್ರಸ್ತುತ ಹಲವು ದಿನಗಳು ಸಮುದ್ರ ಮಟ್ಟಕ್ಕಿಂತಲೂ ತಗ್ಗಿರುವುದಾಗಿ ತಿಳಿಯಲಾಗಿದೆ. ತಿಂಗಳುಗಳ ಹಿಂದೆ ಕೇರಳದ 32 ನದಿಗಳಿಂದ ಹೊಯ್ಗೆ ಗಣಿಗಾರಿಕೆ ಆರಂಭಿಸಲು ನಿರ್ಧರಿಸಲಾಗಿದೆ. ಕಾಸರಗೋಡು, ಕಣ್ಣೂರು, ಪಾಲಕ್ಕಾಡ್, ಮಲಪ್ಪುರಂ, ತೃಶೂರು, ಕೊಲ್ಲಂ, ಪತ್ತನಂತಿಟ್ಟ, ಎರ್ನಾಕುಳಂ ಜಿಲ್ಲೆಗಳ ನದಿಗಳಿಂದ ಗಣಿಗಾರಿಕೆಗೆ ನಿರ್ಧರಿಸಲಾಗಿದೆ. ಯಾವುದೇ ಅಧ್ಯಯನ ನಡೆಸದೆ ಸ್ಟೇಟ್ ಎನ್ವರ್ನ್‌ಮೆಂಟ್ ಅಸಸ್ ಮೆಂಟ್ ಅಥಾರಿಟಿ ಕೆಲವು ದಿನಗಳಿಂದ ಹೊಯ್ಗೆ ಸಂಗ್ರಹಕ್ಕೆ ಅನುಮತಿ ನೀಡಿದೆ.

RELATED NEWS

You cannot copy contents of this page