ನವ ವಧು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಕಲ್ಲಿಕೋಟೆ: ನಾದಾಪುರದಲ್ಲಿ ನವ ವಧು ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ವಡಗರ ವೋರ್ಕಾಟೇರಿ ಮುಹಮ್ಮದ್ ಇರ್ಫಾನ್‌ರ ಪತ್ನಿ ಫಿದಾ ಫಾತಿಮ (22) ಮೃತಪಟ್ಟವರು. ಮಂಗಳವಾರ ಸಂಜೆ ೫ ಗಂಟೆಗೆ ಪಟ್ಟಾಣಿಯಲ್ಲಿರುವ ಸ್ವಂತ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಫಿದಾರನ್ನು ಪತ್ತೆಹಚ್ಚಲಾಗಿತ್ತು. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಆ ವೇಳೆ ಮೃತಪಟ್ಟಿದ್ದರು. ಮಂಗಳವಾರ ಮಧ್ಯಾಹ್ನ ಫಿದಾ ಪತಿ ಗೃಹದಿಂದ ತನ್ನ ಸ್ವಂತ ಮನೆಗೆ ತಲುಪಿದ್ದರು. ಒಂದೂವರೆ ವರ್ಷದ ಹಿಂದೆ ಇವರ ವಿವಾಹ ಜರಗಿದೆ. ಮೃತದೇಹದ ಮಹಜರು ಪ್ರಕ್ರಿಯೆಗಳು ಜರಗಿದ ಬಳಿಕ ಆಸ್ಪತ್ರೆಗೆ ಕೊಂಡುಹೋಗಿ ಪೋಸ್ಟ್‌ಮಾರ್ಟಂ ನಡೆಸಲಾಗಿದ್ದು, ಬಳಿಕ ಸಂಬಂಧಿಕರಿಗೆ ಬಿಟ್ಟುಕೊಡಲಾಗಿದೆ.

You cannot copy contents of this page