ನಾಟಕ ತಂಡದ ಬಸ್ ಅಪಘಾತಕ್ಕೀಡಾಗಿ ಇಬ್ಬರು ಯುವತಿಯರು ದಾರುಣ ಮೃತ್ಯು

ಕಣ್ಣೂರು: ನಾಟಕ ತಂಡ ಪ್ರಯಾಣಿಸುತ್ತಿದ್ದ ಮಿನಿ ಬಸ್ ಅಪಘಾತಕ್ಕೀಡಾಗಿ ಇಬ್ಬರು ಯುವತಿಯರು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.

ಕಾಯಂಕುಳಂ ಮಾದುಕುಳಂ ನಿವಾಸಿ ಅಂಜಲಿ, ಕರುನಾಗಪಳ್ಳಿ ತೇವಲಕ್ಕರ ನಿವಾಸಿ ಜೆಸಿ ಮೋಹನ್ ಎಂಬಿವರು ಮೃತಪಟ್ಟ ದುರ್ದೈವಿ ಯಾಗಿದ್ದಾರೆ. ಅಪಘಾತದಲ್ಲಿ 12 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿ ದೆಯೆಂದು ವರದಿಯಾಗಿದೆ.  ಇವರಲ್ಲಿ ಐದು ಮಂದಿಯನ್ನು  ಚುಂಗಕುನ್ನುವಿನ ಆಸ್ಪತ್ರೆಯಲ್ಲಿ, 5 ಮಂದಿಯನ್ನು ಕಣ್ಣೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಂದು ಮುಂಜಾನೆ ೪ ಗಂಟೆಗೆ ಕಣ್ಣೂರು ಕೇಳಗಂ ಸಮೀಪ ಮಲಯಾಂಪಡಿ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ನಿಯಂತ್ರಣ ತಪ್ಪಿದ ಬಸ್ ತಲೆಕೆಳಗಾಗಿ ಮಗುಚಿ ನಿಂತಿದೆ.ನಿನ್ನೆ ಕಣ್ಣೂರಿನಲ್ಲಿ ನಾಟಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅದರಲ್ಲಿ ಪಾಲ್ಗೊಂಡ ದೇವ ಕಮ್ಯುನಿಕೇಶನ್ ಕಾಯಂಕುಳಂ ಎಂಬ ನಾಟಕ ತಂಡ  ಭಾಗವಹಿಸಿತ್ತು. ಇಂದು ಬತ್ತೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ಈ ತಂಡ ತೆರಳುತ್ತ್ತಿದ್ದ ವೇಳೆ ಅಪಘಾತವುಂಟಾಗಿದೆ.  ಕೇಳಗಂನಿಂದ ನೆಡುಂಪೊಯಿಲ್ ಮೂಲಕ ವಯನಾಡ್‌ಗೆ ತೆರಳಲು ತಂಡ ನಿರ್ಧರಿಸಿತ್ತು. ಆದರೆ ಆ ರೂಟ್‌ನಲ್ಲಿ ಭೂಕುಸಿತ ಭೀತಿಯಿರುವುದರಿಂದ  ವಾಹನ ಸಂಚಾರ ನಿಷೇಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ  ಬೇರೆ ರೂಟ್‌ನಲ್ಲಿ ಸಂಚರಿಸುತ್ತಿದ್ದಾಗ ಅಪಘಾತ ಸಂಭವಿಸಿದೆ.  ಮುಂಜಾನೆ ವೇಳೆಯಾ ದುದರಿಂದ ಅಪಘಾತ ಬಗ್ಗೆ ತಕ್ಷಣ ತಿಳಿದುಬಂದಿಲ್ಲವೆಂದು ಹೇಳಲಾಗುತ್ತಿದೆ. ಈ ರೂಟ್‌ನಲ್ಲಿ ಬಂದ ಇತರ  ವಾಹನ ಪ್ರಯಾ ಣಿಕರಿಗೆ ಅಪಘಾತ  ಅರಿವಿಗೆ ಬಂದಿದೆ. ಕೂಡಲೇ ಸ್ಥಳೀಯರನ್ನು ಸೇರಿಸಿ ಅಪಘಾತಕ್ಕೀ ಡಾದವರನ್ನು ಬಸ್‌ನಿಂದ ಕೆಳಕ್ಕಿಳಿಸಿ ಆಸ್ಪತ್ರೆಗೆ ತಲುಪಿಸಿದ್ದು, ಆದರೆ ಅಷ್ಟರೊಳಗೆ ಇಬ್ಬರು ಮೃತಪಟ್ಟಿದ್ದಾರೆನ್ನಲಾಗಿದೆ.

You cannot copy contents of this page