ನಾರಾಯಣಮಂಗಲದಲ್ಲಿ ಕೆಎಸ್‌ಟಿಪಿ ಬಸ್ ತಂಗುದಾಣ ನಿರ್ಮಾಣಕ್ಕೆ ನಾಗರಿಕರ ತಡೆ
ಕುಂಬಳೆ: ಖಾಸಗಿ ಕಾಲೇಜಿನ ಮುಂಭಾಗ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣ ಚಟುವಟಿಕೆಗೆ ನಾಗರಿಕರು ತಡೆಯೊಡ್ಡಿದ್ದಾರೆ. ನಾರಾಯಣಮಂಗಲದ ಖಾಸಗಿ ಕಾಲೇಜು ಸಮೀಪ ರಸ್ತೆ ಬದಿ ಕೆಎಸ್‌ಟಿಪಿ ನಿರ್ಮಿಸುವ ಬಸ್ ತಂಗು ದಾಣ ಕಾಮಗಾರಿಗೆ ತಡೆಯೊಡ್ಡಲಾಗಿದೆ. ನಿನ್ನೆ ಸಂಜೆ ೭ ಗಂಟೆಗೆ ಈ ಘಟನೆ ನಡೆದಿದೆ. ಕಾಲೇಜಿನಿಂದ ಸುಮಾರು ೧೦೦ ಮೀಟರ್ ಅಂತರದಲ್ಲಿ ಇತ್ತೀಚೆಗೆ ಬಸ್ ತಂಗುದಾಣ ನಿರ್ಮಿಸಲು ಕೆಎಸ್‌ಟಿಪಿ ಅಧಿಕಾರಿಗಳು ಕಾಮಗಾರಿ ಆರಂಭಿಸಿದ್ದರು. ಆದರೆ ಅದರ ನಿರ್ಮಾಣವನ್ನು ಅರ್ಧದಲ್ಲೇ ಉಪೇಕ್ಷಿಸಲಾಗಿದೆ. ಇದು ನಾಗರಿಕರಲ್ಲಿ ತೀವ್ರ ಪ್ರತಿಭಟನೆಗೆ ಕಾರಣವಾಗಿತ್ತು. ಈ ಮಧ್ಯೆ ಕಾಲೇಜು ಸಮೀಪ ತಂಗುದಾಣ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಇದರಿಂದ ರೋಷಗೊಂಡ ನಾಗರಿಕರು ತಲುಪಿ ಕಾಮಗಾರಿಗೆ ತಡೆಯೊಡ್ಡಿದ್ದಾರೆ. ತಂಗುದಾಣದ ಫಿಲ್ಲರ್ ನಿರ್ಮಿಸಲು ಕಾಂಕ್ರೀಟ್‌ಗಾಗಿ ತಲುಪಿದ ವಾಹನಕ್ಕೆ ನಾಗರಿಕರು ತಡೆಯೊಡ್ಡಿದ್ದು, ಇದರಿಂದ ಕಾಮಗಾರಿ ಮೊಟಕುಗೊಂಡಿದೆ. ವಿಷಯ ತಿಳಿದು ತಲುಪಿದ ಪೊಲೀಸರು ಕೆಎಸ್‌ಟಿಪಿ ಅಧಿಕಾರಿಗಳು ಹಾಗೂ ನಗರಿಕರೊಂದಿಗೆ ಚರ್ಚೆ ನಡೆಸಿದ್ದಾರೆ. ಈ ವಿಷಯದಲ್ಲಿ ನಿರ್ಧಾರ ಕೈಗೊಂಡ ಬಳಿಕ ನಿರ್ಮಾಣ ಆರಂಭಿಸಿದರೆ ಸಾಕೆಂದು ಕೆಎಸ್‌ಟಿಪಿಗೆ ಪೊಲೀಸರು ನಿರ್ದೇಶಿಸಿದ್ದಾರೆ. ಇದೇ ವೇಳೆ ನಾರಾಯಣಮಂಗಲದಲ್ಲಿ ಈ ಹಿಂದೆ ಆರಂಭಿಸಿ ಕಾಮಗಾರಿ ಮೊಟಕುಗೊಳಿಸಿದ ಬಸ್ ತಂಗುದಾಣ ನಿರ್ಮಾಣವನ್ನು ಶೀಘ್ರ ಆರಂಭಿಸುವು ದಾಗಿ ಕೆಎಸ್‌ಟಿಪಿ ಅಧಿಕಾರಿಗಳು ತಿಳಿಸಿದ್ದರು. ಆದರೆ ಮೊದಲು ಆರಂಭಿ ಸಿದ ಕಾಮಗಾರಿಯನ್ನು ಪೂರ್ಣಗೊಳಿ ಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ.