ನಿದ್ದೆಯಲ್ಲಿದ್ದಾಗ ಹಾವು ಕಡಿತ: ಬಾಲಕಿ ಮೃತ್ಯು

ಪಾಲಕ್ಕಾಡ್: ಅಜ್ಜಿಯೊಂದಿಗೆ ನಿದ್ರಿಸುತ್ತಿದ್ದ ಬಾಲಕಿ ಹಾವಿನ ಕಡಿತದಿಂದ ಮೃತಪಟ್ಟ ದಾರುಣ ಘಟನೆ ನಡೆದಿದೆ. ಪಾಲಕ್ಕಾಡ್ ಕೊಳಿಂಞ್ಞಂಬಾರ ವಣ್ಣಾಮಡ ಮೂಲಕ್ಕಡ ಎಂಬಲ್ಲಿನ ಮುಹಮ್ಮದ್ ಜುಬೀರಲಿ- ಸಬಿಯಾ ಬೀಗಂ ದಂಪತಿಯ ಪುತ್ರಿ ಅಸ್ಬಿಯಾ ಫಾತಿಮ (8) ಮೃತಪಟ್ಟ ದುರ್ದೈವಿ ಬಾಲಕಿ. ನಿನ್ನೆ ಮುಂಜಾನೆ 1.30ರ ವೇಳೆ ನಿದ್ದೆಯಲ್ಲಿದ್ದ ಬಾಲಕಿಯ  ಅಜ್ಜಿ ರಹ್ಮತ್‌ಗೆ ಹಾವು ಕಡಿದಿತ್ತೆನ್ನಲಾಗಿದೆ.

ವಿಷಯ ತಿಳಿದು ಮನೆಯವರು ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಪಡೆದು ಮರಳುವಷ್ಟರಲ್ಲಿ 2.30ರ ವೇಳೆ ಅಸ್ಬಿಯ ಫಾತಿಮ ಅರೆ ಪ್ರಜ್ಞಾವಸ್ಥೆಯಲ್ಲಿದ್ದಳು. ಬಳಿಕ ನಡೆಸಿದ ಪರಿಶೀಲನೆಯಲ್ಲಿ ಬಾಲಕಿಗೆ ಹಾವು ಕಡಿದ ಬಗ್ಗೆ ತಿಳಿದು ಬಂದಿದೆ.

You cannot copy contents of this page