ನಿಯಂತ್ರಣ ಕ್ರಮ ಫಲಕಾಣ ತೊಡಗಿದೆ: ವಿದ್ಯುತ್ ಉಪಯೋಗದಲ್ಲಿ 200 ಮೆಘಾವಾಟ್ ಇಳಿಕೆ- ಸಚಿವ
ತಿರುವನಂತಪುರ: ರಾಜ್ಯದಲ್ಲಿ ಮಿತಿಮೀರುತ್ತಿರುವ ವಿದ್ಯುತ್ ಉಪಯೋಗವನ್ನು ನಿಯಂತ್ರಿಸಲು ತರಲಾದ ಕ್ರಮ ಫಲಕಾಣತೊಡಗಿದೆ. ಅದರಂತೆ ವಿದ್ಯುತ್ ಉಪಯೋಗದಲ್ಲಿ ೨೦೦ ಮೆಘಾವಾಟ್‌ನಷ್ಟು ಇಳಿಕೆ ಉಂಟಾಗಿದೆ ಎಂದು ರಾಜ್ಯ ವಿದ್ಯುತ್ ಖಾತೆ ಸಚಿವ ಕೆ. ಕೃಷ್ಣನ್ ಕುಟ್ಟಿ ತಿಳಿಸಿದ್ದಾರೆ. ರಾಜ್ಯದಲ್ಲಿ ದೈನಂದಿನ ವಿದ್ಯುತ್ ಉಪಯೋಗ ಈಗ ೫೮೦೦ ಮೆಘಾವಾಟ್‌ನಿಂದ ೫೬೦೦ ಮೆಘಾವ್ಯಾಟ್‌ಗೆ ಇಳಿದಿದೆ. ಇದು ವಿದ್ಯುತ್ ಬಳಕೆದಾರರು ಸ್ವಯಂ ಆಗಿ ಏರ್ಪಡಿಸಿರುವ ನಿಯಂತ್ರಣ ಫಲಶ್ರುತಿಯಾಗಿದೆ. ಅಲಂಕಾರ ಲೈಟ್‌ಗಳು ಮತ್ತು ಇತರ ಅನಗತ್ಯ ಲೈಟ್‌ಗಳನ್ನು ಈ ಸಮಯದಲ್ಲಿ ಉಪಯೋಗಿಸಬಾರದು ಮಾತ್ರವಲ್ಲ ಅನಗತ್ಯವಾಗಿ ವಿದ್ಯುತ್ ಉಪಕರಣಗಳನ್ನು ಸದಾ ಉಪಯೋಗಿಸುವುದನ್ನು ಗರಿಷ್ಠ ಪ್ರಮಾಣ ಹೊರತುಪಡಿಸಿ ಜನರು ಸಹಕರಿಸಬೇಕೆಂದು ಸಚಿವರು ಇದೇ ಸಂದರ್ಭದಲ್ಲಿ ವಿನಂತಿಸಿಕೊಂಡಿದ್ದಾರೆ.
ವಿದ್ಯುತ್ ಲೋಡ್ ಹೆಚ್ಚುವ ಪ್ರದೇಶಗಳಲ್ಲಿ ವಿದ್ಯುತ್ ನಿಯಂತ್ರಣ ಹೇರುವ ಕ್ರಮವನ್ನು ವಿದ್ಯುನ್ಮಂಡಳಿ ನಿನ್ನೆಯಿಂದಲೇ ಆರಂಭಿಸಿದೆ.