ನಿರಂತರ ನಗ್ನತೆ ಪ್ರದರ್ಶಿಸಿದ ಯುವಕ : ಫೋಟೋ ತೆಗೆದು ಪೊಲೀಸರಿಗೆ ನೀಡಿದ ಬಾಲಕಿ
ಕಾಸರಗೋಡು: ಪದೇ ಪದೇ ನಗ್ನತೆ ಪ್ರದರ್ಶಿಸಿದ ಯುವಕನ ಫೋಟೋವನ್ನು ತೆಗೆದ ಹದಿನಾರರ ಹರೆಯದ ಬಾಲಕಿ ಅದನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಪೋಕ್ಸೋ ಕೇಸು ದಾಖಲಿಸಿಕೊಂಡ ಬೇಕಲ ಪೊಲೀಸರು ಯುವಕನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಪೆರಿಯ ಸಮೀಪದ ಶ್ರೀನಾಥ್ (27) ಎಂಬಾತ ಕಸ್ಟಡಿಯಲ್ಲಿರುವ ಯುವಕನಾಗಿದ್ದಾನೆ. ಪೆರಿಯ ರಾಷ್ಟ್ರೀಯ ಹೆದ್ದಾರಿಯಿಂದ ನಾಲ್ಕು ಕಿಲೋ ಮೀಟರ್ ಅಂತರದಲ್ಲಿ ಘಟನೆ ನಡೆದಿದೆ. ಬಾಲಕಿಯ ಮುಂದೆ ಯುವಕ ಹಲವು ಬಾರಿ ನಗ್ನತೆ ಪ್ರದರ್ಶಿಸಿದ್ದಾನೆ. ಇದರಿಂದ ಆತನಿಗೆ ಹಲವು ಬಾರಿ ತಾಕೀತು ನೀಡಿದರೂ ಪ್ರಯೋಜನವಾಗಲಿಲ್ಲ. ಈತ ಆ ಕೃತ್ಯವನ್ನು ಪುನರಾವರ್ತಿಸಿದಾಗ ಬಾಲಕಿ ಫೋಟೋ ತೆಗೆದು ಪೊಲೀಸರಿಗೆ ಹಸ್ತಾಂತರಿಸಿದ್ದಾಳೆ. ಇದರಿಂದ ಪೋಕ್ಸೋ ದಾಖಲಿಸಿಕೊಂಡ ಪೊಲೀಸರು ಎಸ್.ಸಿ ಕಾಯ್ದೆ ಯನ್ನೂ ಸೇರಿಸಿದ್ದಾರೆ.