ನಿರ್ಗತಿಕ ಕುಟುಂಬಕ್ಕೆ ಬಿಎಂಎಸ್‌ನಿಂದ ಮನೆ ಹಸ್ತಾಂತರ

ಕಾಸರಗೋಡು: ಕುಟುಬದ ಆಧಾರಸ್ತಂಭವಾಗಿದ್ದ ಎರಡು ಮಕ್ಕಳನ್ನು ಕಳೆದುಕೊಂಡು ನಿರ್ಗತಿಕರಾದ ತಾಯಿ ಹಾಗೂ ಪುತ್ರಿಗೆ ‘ಮಾನವ ಸೇವಾ ಮಾಧವ ಸೇವಾ’ ಎಂಬ ಆಪ್ತ ವಾಕ್ಯದಂತೆ ಬಿಎಂಎಸ್ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕೂಡ್ಲು ಪಚ್ಚಕ್ಕಾಡ್‌ನಲ್ಲಿ ನಿರ್ಮಿಸಿದ ಮನೆಯ ಕೀಲಿ ಕೈಯನ್ನು ವೀಣಾ ಕುಮಾರಿ ಹಾಗೂ ಪುತ್ರಿಗೆ ಹಸ್ತಾಂತರಿಸ ಲಾಯಿತು.  ಆರ್‌ಎಸ್‌ಎಸ್ ಜಿಲ್ಲಾ ಸಂಘ್ ಚಾಲಕ್ ಪ್ರಭಾಕರನ್ ಕೀಲಿಕೈ ಹಸ್ತಾಂತರಿಸಿದರು. ಬಿಎಂಎಸ್ ರಾಜ್ಯ ಉಪಾಧ್ಯಕ್ಷ ಆರ್.ಪಿ. ಮುರಳೀಧರನ್, ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು, ಜಿಲ್ಲಾ ಅಧ್ಯಕ್ಷ ಉಪೇಂದ್ರ ಕೋಟೆಕಣಿ, ಕಾರ್ಯದರ್ಶಿ ಪಿ. ದಿನೇಶ್ ಬಂಬ್ರಾಣ, ಜಿಲ್ಲಾ ಜೊತೆ ಕಾರ್ಯದರ್ಶಿಗಳಾದ ಗುರುದಾಸ್ ಮಧೂರು, ಹರೀಶ್ ಕುದ್ರೆಪ್ಪಾಡಿ, ಕಾಸರಗೋಡು ವಲಯ ಅಧ್ಯಕ್ಷ ಬಾಲಕೃಷ್ಣನ್ ನೆಲ್ಲಿಕುಂಜೆ, ವಲಯ ಕಾರ್ಯದರ್ಶಿ ಬಾಬುಮೋನ್ ಚೆಂಗಳ, ಮಧೂರು ಪಂ. ಅದ್ಯಕ್ಷ ಗೋಪಾಲಕೃಷ್ಣ, ಬಿಜೆಪಿ  ನಗರಸಭಾ ವಿಪಕ್ಷ ಮುಖಂಡ ಪಿ. ರಮೇಶ್, ವಾರ್ಡ್ ಪ್ರತಿನಿಧಿ ರಾಧಾ ಪಚ್ಚಕ್ಕಾಡ್ ಭಾಗವಹಿಸಿದರು.

You cannot copy contents of this page