ನೀರಿನಲ್ಲಿ ಕೊಚ್ಚಿಹೋದ ಕಾರು, ಸ್ಕೂಟರ್, ಬೈಕ್

ಮಂಜೇಶ್ವರ: ಬಿರುಸಿನ ಮಳೆಗೆ ಕಾರು, ಸ್ಕೂಟರ್, ಬೈಕ್ ನೀರುಪಾಲಾಗಿದೆ. ಮಂಜೇಶ್ವರ, ಮಜಿಬೈಲು ಪಟ್ಟತ್ತೂರ್‌ನಲ್ಲಿ ಈ ಘಟನೆ ನಡೆದಿದೆ. ಮನೆಗಳಿಗೆ ವಾಹನಗಳಲ್ಲಿ ತೆರಳಲು ರಸ್ತೆ ಇಲ್ಲದ ಕಾರಣ ಬಯಲಿನ ಬದಿಯಲ್ಲಿ ವಾಹನಗಳನ್ನು ನಿಲುಗಡೆಗೊಳಿಸಲಾಗುತ್ತಿತ್ತು. ನಿನ್ನೆ ರಾತ್ರಿ ಇಲ್ಲಿ ನಿಲ್ಲಿಸಿದ ವಾಹನಗಳು ನೀರುಪಾಲಾದ ಬಗ್ಗೆ ಇಂದು ಬೆಳಿಗ್ಗೆ ತಿಳಿದು ಬಂದಿದೆ. ಬಳಿಕ ನಡೆಸಿದ ಹುಡುಕಾಟದಿಂದ ಕಾರು ಬಯಲಿನಲ್ಲಿ ನೀರಿನಲ್ಲಿ ಮುಳುಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅರ್ಪಿತ್ ಎಂಬವರ ಕಾರು ಈ ರೀತಿ ನೀರಿಗೆ ಕೊಚ್ಚಿಕೊಂಡು ಹೋಗಿರುವುದು. ಇದೇ ವೇಳೆ ವಿಕಿತ್ ಎಂಬವರ ಸ್ಕೂಟರ್ ಹಾಗೂ ಶಿವಪ್ರಸಾದ್‌ರ ಬೈಕ್‌ಗಳನ್ನು ಪತ್ತೆಹಚ್ಚಲು ಯತ್ನ ಆರಂಭಿಸಲಾಗಿದೆ.

You cannot copy contents of this page