ಕಣ್ಣೂರು: ತೇಜಸ್ವಿನಿ ಹೊಳೆಯಲ್ಲಿ ಸ್ನಾನಕ್ಕೆಂದು ಇಳಿದು ಯುವಕ ಮುಳುಗಿ ಮೃತಪಟ್ಟರು. ಚೆರುಪುಳ ನಿವಾಸಿ ವಿನು ಕುಟ್ಟನ್ (೪೫) ಮೃತಪಟ್ಟವರು. ಇಂದು ಬೆಳಿಗ್ಗೆ ಕಂಬಿಪಾಲ ಸಮೀಪ ಹೊಳೆಯಲ್ಲಿ ಸ್ನಾನಕ್ಕೆಂದು ಇಳಿದಾಗ ಅಪಾಯ ಸಂಭವಿಸಿದೆ. ಇವರ ಜೊತೆ ಇದ್ದವರು ಕೂಡಲೇ ನೀರಿನಿಂದ ಮೇಲೆತ್ತಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ.