ನೀರು ಹರಿಯಲು ಚರಂಡಿ ಇಲ್ಲ: ಮನೆ ಪರಿಸರ ಜಲಾವೃತ
ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ ಮಣಿಮುಂಡ ಎಂಬಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆನೀರು ಹರಿದು ಸ್ಥಳೀಯರ ಮನೆ ಹಾಗೂ ಪರಿಸರ ಜಲಾವೃತ ಗೊಂಡಿದೆ. ಕೀಯೂರು ಮೊಹಮ್ಮದ್ ಹಾಗೂ ಹಮೀದ್ ಎಂಬವರ ಮನೆ ಪರಿಸರದಲ್ಲಿ ನೀರು ಕಟ್ಟಿ ನಿಂತಿದ್ದು, ಸತತ ಮಳೆಗೆ ಮನೆಯೊಳಗೂ ನೀರು ನುಗ್ಗುತ್ತಿರುವುದಾಗಿ ತಿಳಿಸಿದ್ದಾರೆ. ಇದರಿಂದಾಗಿ ಕುಟುಂಬಗಳು ಸಂಕಷ್ಟಕ್ಕೀಡಾಗಿವೆ. ಅಲ್ಲದೆ ರಸ್ತೆಯಲ್ಲಿ ವಾಹನ ಸಂಚಾರಕ್ಕೂ ಸಮಸ್ಯೆ ಉಂಟಾಗುತ್ತಿದೆ.
ಮಳೆನೀರು ಚರಂಡಿಯಲ್ಲಿ ಹರಿದು ನೇರ ಸಮುದ್ರ ಸೇರಬೇಕಾಗಿದ್ದು, ಆದರೆ ಚರಂಡಿಯಲ್ಲಿ ಮಣ್ಣು, ಕಸ, ಕಡ್ಡಿಗಳು ತುಂಬಿಕೊಂಡು ನೀರು ಕಟ್ಟಿ ನಿಲ್ಲುತ್ತಿದೆ. ಇದು ಬಳಿಕ ಪರಿಸರದೆಲ್ಲೆಡೆ ಹರಿಯು ತ್ತಿದೆ. ಚರಂಡಿ ದುರಸ್ತಿಗೊ ಳಿಸಲು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮ ಉಂಟಾ ಗಿಲ್ಲವೆಂದು ಸ್ಥಳೀಯರು ದೂರಿದ್ದಾರೆ.