ನೀರ್ಚಾಲು: ಬೈಕ್ ಢಿಕ್ಕಿ ಹೊಡೆದು ಲಾಟರಿ ಏಜೆಂಟ್ ಮೃತ್ಯು

ನೀರ್ಚಾಲು: ನೀರ್ಚಾಲಿನಲ್ಲಿ ಬೈಕ್ ಢಿಕ್ಕಿ  ಹೊಡೆದು ಗಂಭೀರ ಗಾಯಗೊಂ ಡಿದ್ದ ಲಾಟರಿ ಏಜೆಂಟ್ ಮೃತಪಟ್ಟರು.

ಕಣ್ಣೂರು ಆಲಕ್ಕೋಡ್  ಕಾಪಿಮಲೆ ಹೌಸ್‌ನ ಸಾಜು ಜೋರ್ಜ್ (61) ಮೃತಪಟ್ಟ ವ್ಯಕ್ತಿ. ಸೋಮವಾರ ರಾತ್ರಿ 8 ಗಂಟೆ ವೇಳೆ ನೀರ್ಚಾಲು ವಿ.ಎಂ.ನಗರದಲ್ಲಿ ಅಪಘಾತ ಸಂಭವಿಸಿತ್ತು. ಸಾಜು ಜೋರ್ಜ್ ರಸ್ತೆ ದಾಟುತ್ತಿದ್ದ ವೇಳೆ ತಲುಪಿದ ಬೈಕ್ ಅವರಿಗೆ ಢಿಕ್ಕಿ ಹೊಡೆದಿತ್ತು. ಇದರಿಂದ ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಊರಿಗೆ ಕೊಂಡೊಯ್ಯಲಾಯಿತು.

ಹಲವು ವರ್ಷಗಳಿಂದ ನೀರ್ಚಾಲಿನಲ್ಲಿ ಏಕಾಂಗಿಯಾಗಿ ವಾಸಿಸಿ ಆ ಪರಿಸರದಲ್ಲಿ ಲಾಟರಿ ಮಾರಾಟ ನಡೆಸುತ್ತಿದ್ದರು.  ದಿ| ಜೋರ್ಜ್-ಮರ್ಸಿ ದಂಪತಿಯ ಪುತ್ರನಾದ ಮೃತರು ಪುತ್ರಿ ಶ್ರುತಿ, ಸಹೋದರ ರಾಜು ಜೋರ್ಜ್ ಮೊದಲಾದವರನ್ನು ಅಗಲಿದ್ದಾರೆ.

You cannot copy contents of this page