ನೀರ್ಚಾಲು: ಮನೆಯಿಂದ ಕಳವಿಗೆ ಯತ್ನ

ನೀರ್ಚಾಲು: ನೀರ್ಚಾಲ್‌ನಲ್ಲಿ ಜನವಾಸವಿಲ್ಲದ ಮನೆಯೊಂದರಿಂದ ಕಳವು ಯತ್ನ ನಡೆದಿದೆ. ಇಲ್ಲಿನ ಮದಕ ಎಂಬಲ್ಲಿ ಗೋಪಾಲನ್ ಎಂಬವರ ಮನೆಗೆ ಕಳ್ಳರು ನುಗ್ಗಿದ್ದಾರೆ. ಗೋಪಾಲನ್ ಮಡಿಕೇರಿಯಲ್ಲಿ ಬ್ಯಾಂಕ್ ನೌಕರನಾಗಿದ್ದು, ಅವರು ಇತ್ತೀಚೆಗಷ್ಟೇ ಮನೆಗೆ ಬೀಗ ಜಡಿದು ತೆರಳಿದ್ದರು. ನಿನ್ನೆ ಬೆಳಿಗ್ಗೆ ಮನೆಯ ಬಾಗಿಲು ಮುರಿದ ಸ್ಥಿತಿಯಲ್ಲಿರುವುದು ಸ್ಥಳೀಯರ ಗಮನಕ್ಕೆ ಬಂದಿತ್ತು. ಈ ಬಗ್ಗೆ ಸ್ಥಳೀಯರು ನೀಡಿದ ದೂರಿನಂತೆ ಪೊಲೀಸರು ತಲುಪಿ ಪರಿಶೀಲನೆ ನಡೆಸಿದ್ದಾರೆ.  ಮನೆಯೊಳಗೆ ಕಳ್ಳರು   ಓಡಾಡಿದ ಕುರುಹು ಪತ್ತೆಯಾಗಿದ್ದು, ಆದರೆ ಯಾವುದೇ ಸೊತ್ತು ಕಳವಿಗೀ ಡಾದ ಬಗ್ಗೆ ತಿಳಿದುಬಂದಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page