ನೀಲೇಶ್ವರ ಸುಡುಮದ್ದು ಅವಘಡವನ್ನು ರಾಜ್ಯ ದುರಂತವನ್ನಾಗಿ ಘೋಷಿಸಿದ ಸರಕಾರ: ಮೃತರ ಕುಟುಂಬಕ್ಕೆ ತಲಾ 4 ಲಕ್ಷರೂ.ನಂತೆ ಪರಿಹಾರ

ಕಾಸರಗೋಡು: ನೀಲೇಶ್ವರ ಅಂಞೂಟಂಬಲ ವೀರರ್‌ಕಾವು ಕ್ಷೇತ್ರದಲ್ಲಿ ಸುಡುಮದ್ದು ಪ್ರದರ್ಶನ ವೇಳೆ ಉಂಟಾದ ದುರಂತವನ್ನು ರಾಜ್ಯ ಸರಕಾರ ರಾಜ್ಯ ದುರಂತವನ್ನಾಗಿ ಘೋಷಿಸಿದೆ. ಈ ದುರಂತದಲ್ಲಿ ಸಾವನ್ನಪ್ಪಿದ ನಾಲ್ವರ ಕುಟುಂಬಕ್ಕೆ  ಮುಖ್ಯಮಂತ್ರಿಯವರ ವಿಪತ್ತು ಪರಿಹಾರ ನಿಧಿಯಿಂದ ತಲಾ ನಾಲ್ಕು ಲಕ್ಷ ರೂ. ನಂತೆ ಸರಕಾರ ಪರಿಹಾರ ಘೋಷಿಸಿದೆ. ನಿನ್ನೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಈ ದುರಂತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವವರಿಗೂ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ಸಹಾಯ ನೀಡುವ ತೀರ್ಮಾನವನ್ನೂ ಸಭೆ ಕೈಗೊಂಡಿದೆ. ಸಹಾಯಧನ ವಿತರಿಸುವಹೊಣೆ ಗಾರಿಕೆಯನ್ನು ಜಿಲ್ಲಾ ಧಿಕಾರಿಗೆ ಸರಕಾರ ವಹಿಸಿಕೊಟ್ಟಿದೆ.

ಇನ್ನೊಂದೆಡೆ ಈ ದುರಂತಕ್ಕೆ ಸಂಬಂಧಿಸಿ ಬಂಧಿತರಾದ ಶ್ರೀ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ಪಿ.ಕೆ. ಚಂದ್ರಶೇಖರನ್, ಇತರ ಪದಾಧಿಕಾರಿಗಳಾದ ಕೆ.ಟಿ. ಭರತನ್ ಮತ್ತು ಏಳನೇ ಆರೋಪಿ ಪಿ. ರಾಜೇಶ್‌ಗೆ ಹೊಸದುರ್ಗ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ  ನೀಡಿದ ಜಾಮೀನನ್ನು ರದ್ದುಪಡಿಸಬೇ ಕೆಂದು ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿರುವ ಹೊಸದುರ್ಗ ಡಿವೈಎಸ್ಪಿ ಬಾಬು ಪೆರಿಂಙೋತ್ತ್ ಸಲ್ಲಿಸಿರುವ ಅರ್ಜಿಯ ಮೇಲಿನ ತೀರ್ಪನ್ನು ಜಿಲ್ಲಾ ಸೆಶನ್ಸ್ ನ್ಯಾಯಾ ಲಯ ಇಂದು ಪರಿಶೀಲಿಸಲಿದೆ. ಈ ದುರಂತದಲ್ಲಿ ಗಾಯಗೊಂಡ ೭೦ರಷ್ಟು ಮಂದಿ ವಿವಿಧ ಆಸ್ಪತ್ರೆಗಳಲ್ಲಿ  ಈಗಲೂ ಚಿಕಿತ್ಸೆಯಲ್ಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page