ನೇತ್ರಾವತಿಯಲ್ಲಿ ನೀರಿನ ಸೆಳೆತಕ್ಕೆ ಸಿಲುಕಿದ ಯುವಕನಿಗಾಗಿ ಹುಡುಕಾಟ
ಉಜಿರೆ: ನೇತ್ರಾವತಿ ನದಿಯಲ್ಲಿ ನೆರೆಗೆ ಸಿಲುಕಿ ನಾಪತ್ತೆಯಾದ ಯುವಕನನ್ನು ಪತ್ತೆಹಚ್ಚಲು ಹುಡುಕಾಟ ಇಂದೂ ಮುಂದುವರಿಯುತ್ತಿದೆ. ಬೆಳ್ತಂಗಡಿ ಬೆಳಾಲು ಸುರುಳಿ ನಿವಾಸಿ ಪ್ರಸಾದ್ (38) ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದರು. ನಿನ್ನೆ ಸಂಜೆ ಇವರು ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ. ಮಾಹಿತಿ ತಿಳಿದು ಅಗ್ನಿಶಾಮಕದಳ ಸಹಿತ ಪ್ರಕೃತಿ ವಿಕೋಪ ಸೇನೆ ಸದಸ್ಯರು ಹುಡುಕಾಟ ನಡೆಸುತ್ತಿದ್ದಾರೆ. ಇಂದು ಈಶ್ವರ ಮಲ್ಪೆ ಕೂಡಾ ಹುಡುಕಾಟ ನಡೆಸಲಿದ್ದಾರೆ.