ನೈಯಾರ್‌ನಿಂದ ಮಂಜೇಶ್ವರ ತನಕ ನದಿ ಸಂರಕ್ಷಣಾ ಯಾತ್ರೆ
ಮಂಜೆಶ್ವರ: ಒಳ್ಳೆಯ ದಿನಗಳಿಗಾಗಿ ಕೇರಳದ ನದಿಗಳನ್ನು ಸಂರಕ್ಷಿಸಿದೆ ಎಂಬ ಸಂದೇಶದೊಂ ದಿಗೆ ನೇಶನಲ್ ಎನ್‌ಜಿಒ ಕಾನ್ಫೆಡರೇಶನ್ ನೇತೃತ್ವದಲ್ಲಿ ತಿರುವನಂತಪುರ ಜಿಲ್ಲೆಯ ನೆಯ್ಯಾರ್‌ನಿಂದ ಆರಂಭಗೊಂಡು ಕಾಸರಗೋಡು ಜಿಲ್ಲೆಯ ಮಂಜೇಶ್ವರ ‘ಹೊಳೆ ತನಕದ ನದಿಗಳಿಗೂ ಬೇಕು ಸಂರಕ್ಷಣೆ’ ಎಂಬ ಹೆಸರಲ್ಲಿ ನದಿಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ.
ಸರಕಾರದ ಅನುಮತಿಯೊಂದಿಗೆ ಈ ಯಾತ್ರೆ ನಡೆಸಲಾಗುವುದು. ಇದರಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನದಿಗಳ ಸುತ್ತಲೂ ಹೂದೋಟ ನಿರ್ಮಿಸಲಾಗುವುದು. ಮೇ ತಿಂಗಳ ಮೊದಲ ವಾರದಲ್ಲಿ ಆಟ್ಟಿಂಙಾಲ್ ಮಾಮಂ ಹೊಳೆಯಲ್ಲಿ ಈ ಯಾತ್ರೆಯ ಉದ್ಘಾಟನೆ ನಡೆಯಲಿದೆ. ಎನ್‌ಜಿಎ ಕಾನ್ಫೆಡರೇಶನ್ ರಾಷ್ಟ್ರೀಯ ಅಧ್ಯಕ್ಷ ಕೆ.ಎನ್. ಆನಂದ ಕುಮಾರ್ ನೇತೃತ್ವದಲ್ಲಿ ನದಿಯಾತ್ರೆ ನಡೆಯಲಿದೆ. ಇದರಲ್ಲಿ ೩೦೦೦ದಷ್ಟು ಸಾಮಾಜಿಕ ಸ್ವಯಂ ಸೇವಾ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸುವರು. ನದಿ ಯಾತ್ರೆಯ ಅಂಗವಾಗಿ ವಿವಿಧ ರೀತಿಯ ಸ್ಪರ್ಧೆಗಳು, ಕಲಾ ಕಾರ್ಯಕ್ರಮಗಳು, ಪೋಸ್ಟರ್ ಪ್ರದರ್ಶನ, ಬೀದಿ ನಾಟಕ, ಓಟ್ಟಂ ತುಳ್ಳಲ್ ಇತ್ಯಾದಿ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ. ಕೇರಳದ ಎಲ್ಲಾ ವಿಭಾಗಗಳಲ್ಲಿರುವ ಜನರನ್ನು ಯಾತ್ರೆಯಲ್ಲಿ ಪಾಲ್ಗೊಳಿಸುವಂತೆ ಮಾಡಲಾಗುವುದೆಂದು ಎನ್‌ಜಿಒ ಕಾನ್ಫೆಡರೇಶನ್‌ನ ರಾಷ್ಟ್ರೀಯ ಸಂಯೋಜಕ ಅನಂತುಕೃಷ್ಣನ್ ತಿಳಿಸಿದ್ದಾರೆ. ಡಾ. ವಿ. ಸುಭಾಶ್ಚಂದ್ರ ಬೋಸ್ ಈ ಯಾತ್ರಾ ಸಮಿತಿಯ ಪ್ರಧಾನ ಸಂಚಾಲಕರಾಗಿದ್ದಾರೆ.