ಮಂಜೇಶ್ವರ: ಎಲ್‌ಪಿ ವಿಭಾಗ ಕನ್ನಡ ಅಧ್ಯಾಪಕ ರ‍್ಯಾಂಕ್ ಲಿಸ್ಟ್‌ನಿಂದ ನೇಮಕಾತಿಗೆ ಉಂಟಾಗುತ್ತಿರುವ ವಿಳಂಬವನ್ನು ಹೊರತುಪಡಿಸಬೇಕೆಂದು ಮೀಂಜ ಪಂಚಾಯತ್ ಯೂತ್ ಲೀಗ್ ಸಚಿವ ಶಂಸುದ್ದೀನ್‌ರಿಗೆ ಮನವಿ ನೀಡಿದೆ. ಕನ್ನಡ ಎಲ್‌ಪಿ ಅಧ್ಯಾಪಕ ಹುದ್ದೆಗಳನ್ನು ಕೂಡಲೇ ಭರ್ತಿಗೊಳಿಸಬೇಕೆಂದು, ಅದಕ್ಕಾಗಿ ನಿರ್ದೇಶ ನೀಡಬೇಕೆಂದು ಯೂತ್ ಲೀಗ್ ಪಂಚಾಯತ್ ಸಮಿತಿ ಅಧ್ಯಕ್ಷ ರಿಯಾಸ್ ಚಿಗುರುಪಾದೆ, ಪ್ರಧಾನ ಕಾರ್ಯದರ್ಶಿ ಜಾಸಿಮ್ ಕಡಂಬೇರಿ, ಅಶ್ರಫ್ ಮಜೀರ್ಪಳ್ಳ ಸಚಿವರಿಗೆ ನೀಡಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.






