ಬೆಂಗಳೂರು ಕೃಷ್ಣರಾಜಪುರದಲ್ಲಿ ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್‌ನ ನೂತನ ಶೋರೂಂ ಉದ್ಘಾಟನೆ

 .

ಕಾಸರಗೋಡು: ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್‌ನ 25ನೇ ಶೋರೂಂ ಹಾಗೂ ಬೆಂಗಳೂರು ನಗರದ 8ನೇ ಶೋರೂಂ ಕೃಷ್ಣರಾಜಪುರದಲ್ಲಿ ನಟಿ ನಿಕ್ಕಿ ಗಲ್‌ರಾಣಿ ಉದ್ಘಾಟಿಸಿದರು. ಈ ಶೋರೂಂನಲ್ಲಿ ಚಿನ್ನ, ಡೈಮಂಡ್, ಪ್ಲಾಟಿನಂ, ಪೋಲ್ಕಿ, ಅನ್‌ಕಟ್ ಡೈಮಂಡ್, ಪ್ರೀಶ್ಯಸ್, ಬೆಳ್ಳಿ ಆಭರಣ ಗಳು ಎಂಬಿವುಗಳ ವಿಪುಲ ಸಂಗ್ರಹ ಸಿದ್ಧಪಡಿಸಲಾಗಿದೆ ಎಂದು ಮೆನೇಜಿಂಗ್ ಡೈರೆಕ್ಟರ್ ಅಬ್ದುಲ್ ರೌಫ್ ತಿಳಿಸಿದ್ದಾರೆ. ಗ್ರಾಹಕರ ವಿಶ್ವಾಸ ಕಂಪೆನಿಯ ಅತ್ಯಂತ ದೊಡ್ಡ ಶಕ್ತಿಯಾಗಿದ್ದು, ಪ್ರತೀ ಆಭರ ಣಕ್ಕೂ ಅಂತಾರಾಷ್ಟ್ರೀಯ ಗುಣಮಟ್ಟ ವಿರುವ ಸರ್ಟಿಫಿಕೇಶನ್ ಖಚಿತಪಡಿಸ ಲಾಗುತ್ತಿದೆ ಎಂದು ಅವರು ನುಡಿದರು.

ಸ್ಥಳೀಯ ಶಾಸಕ ಬಿ.ಎ. ಬಸವರಾಜ್, ಬೆಂಗಳೂರು ಈಸ್ಟ್ ಜಿಬಿಎ ಜಿಲ್ಲಾಧ್ಯಕ್ಷ ಡಿ.ಕೆ. ಮೋಹನ್‌ಬಾಬು, ಮೆನೇಜಿಂಗ್ ಡೈರೆಕ್ಟರ್ ಡಾ. ಅಬ್ದುಲ್ ರೌಫ್, ಡೈರೆಕ್ಟರ್ ಅಬ್ದುಲ್ ರಿಯಾಸ್, ಜನರಲ್ ಮೆನೇಜರ್ ಉಣ್ಣಿತ್ತಾನ್ ಭಾಗವಹಿಸಿದರು.ಕನ್ನಡ ಎಲ್‌ಪಿ ಅಧ್ಯಾಪಕ ರ‍್ಯಾಂಕ್ ಲಿಸ್ಟ್‌ನಿಂದ ನೇಮಕಕ್ಕೆ ಯೂತ್ ಲೀಗ್ ಮನವಿ

ಮಂಜೇಶ್ವರ: ಎಲ್‌ಪಿ ವಿಭಾಗ ಕನ್ನಡ ಅಧ್ಯಾಪಕ ರ‍್ಯಾಂಕ್ ಲಿಸ್ಟ್‌ನಿಂದ ನೇಮಕಾತಿಗೆ ಉಂಟಾಗುತ್ತಿರುವ ವಿಳಂಬವನ್ನು ಹೊರತುಪಡಿಸಬೇಕೆಂದು ಮೀಂಜ ಪಂಚಾಯತ್ ಯೂತ್ ಲೀಗ್ ಸಚಿವ ಶಂಸುದ್ದೀನ್‌ರಿಗೆ ಮನವಿ ನೀಡಿದೆ. ಕನ್ನಡ ಎಲ್‌ಪಿ ಅಧ್ಯಾಪಕ ಹುದ್ದೆಗಳನ್ನು ಕೂಡಲೇ ಭರ್ತಿಗೊಳಿಸಬೇಕೆಂದು, ಅದಕ್ಕಾಗಿ ನಿರ್ದೇಶ ನೀಡಬೇಕೆಂದು ಯೂತ್ ಲೀಗ್ ಪಂಚಾಯತ್ ಸಮಿತಿ ಅಧ್ಯಕ್ಷ ರಿಯಾಸ್ ಚಿಗುರುಪಾದೆ, ಪ್ರಧಾನ ಕಾರ್ಯದರ್ಶಿ ಜಾಸಿಮ್ ಕಡಂಬೇರಿ, ಅಶ್ರಫ್ ಮಜೀರ್ಪಳ್ಳ ಸಚಿವರಿಗೆ ನೀಡಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.

You cannot copy contents of this page