ಪಚ್ಚಂಬಳದಲ್ಲಿ ಕೆಂಪುಕಲ್ಲು ಕ್ವಾರೆಯಿಂದ ಸಮಸ್ಯೆ- ದೂರು

ಕುಂಬಳೆ: ಪಚ್ಚಂಬಳದಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಕೆಂಪುಕಲ್ಲಿನ ಕ್ವಾರೆಯಿಂದ ಸ್ಥಳೀಯರಿಗೆ ಸಮಸ್ಯೆ ಸೃಷ್ಟಿಯಾಗಿದೆಯೆಂದು ದೂರಲಾಗಿದೆ.

ಮಸೀದಿ, ದರ್ಗಾ, ಹತ್ತರಷ್ಟು ಮನೆಗಳಿರುವ ಪ್ರದೇಶದಲ್ಲಿ ಸುಮಾರು ೫೦ ಸೆಂಟ್ ಸ್ಥಳದಲ್ಲಿ ಕ್ವಾರೆ ಕಾರ್ಯಾಚರಿಸುತ್ತಿದೆ ಎನ್ನಲಾಗಿದೆ. ಕ್ವಾರೆಯಿಂದ ಕರ್ಕಶ ಶಬ್ದ ಹಾಗೂ ದೂಳಿನಿಂದಾಗಿ ಸಮಸ್ಯೆ ಎದುರಾಗಿದೆಯೆಂದು ನಾಗರಿಕರು ತಿಳಿಸುತ್ತಿದ್ದಾರೆ. ಈ ಕ್ವಾರೆಯಿಂದ ಉಂಟಾಗಿರುವ ಸಮಸ್ಯೆಯನ್ನು ವಿವರಿಸಿ ಸಂಬಂಧಪಟ್ಟ ಇಲಾಖೆಯ  ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಆದರೆ ನಾಮಪತ್ರವಾಗಿ ಅಧಿಕಾರಿಗಳು ಕ್ವಾರೆಗೆ ಭೇಟಿ ನೀಡಿ ಮರಳಿದ್ದಾರೆ. ಆದರೆ ಕ್ವಾರೆಯ ಕಾರ್ಯಾಚರಣೆಗೆ ತಡೆಯೊಡ್ಡಲು ಕ್ರಮ ಕೈಗೊಂಡಿಲ್ಲವೆಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

RELATED NEWS

You cannot copy contents of this page